ಗಂಡನ ಮೊಬೈಲ್‌ಗೆ ಪತ್ನಿಯ ಅಕ್ರಮ ಸಂಬಂಧ ವಿಡಿಯೋ – ಮಾರಕಾಸ್ತ್ರಗಳಿಂದ ಹೊಡೆದು ಹೆಂಡತಿಯ ಹತ್ಯೆ

Public TV
2 Min Read
murder copy

ಬೆಂಗಳೂರು: ಹೆಂಡತಿಯ ಅಕ್ರಮ ಸಂಬಂಧದ (Illicit Relationship) ವಿಡಿಯೋ (Video) ಮೊಬೈಲ್‌ನಲ್ಲಿ ನೋಡಿದ ಪತಿ ಮಾರಕಾಸ್ತ್ರಗಳಿಂದ ಹೊಡೆದು ಪತ್ನಿಯನ್ನು ಭೀಕರವಾಗಿ ಕೊಲೆಗೈದ ಘಟನೆ ಬೆಂಗಳೂರಿನ (Bengaluru) ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.

ಶಂಕರ್ ಕೊಲೆ ಮಾಡಿದ ಆರೋಪಿಯಾಗಿದ್ದು, ಪತ್ನಿ ಗೀತಾಳನ್ನು ಹತ್ಯೆ ಮಾಡಿದ ಬಳಿಕ ಆಕೆಯ ತಾಯಿಗೆ ಕರೆ ಮಾಡಿ ಮಗಳನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಆರೋಪಿ ಶಂಕರ್ 13 ವರ್ಷಗಳ ಹಿಂದೆ ಗೀತಾಳನ್ನು ಮದುವೆ ಆಗಿದ್ದ. ಇಬ್ಬರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಒಂದು ಗಂಡು ಮಗು ಇದೆ. ಆರೋಪಿ ಶಂಕರ್‌ ಪತ್ನಿ ಗೀತಾ ಬೇರೋಬ್ಬನ ಜೊತೆ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದನ್ನೂ ಓದಿ: ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ

CRIME

ಹೆಂಡತಿಯ ಮೇಲೆ ಗಂಡನಿಗಿದ್ದ ಅನುಮಾನಕ್ಕೆ ಸಾಕ್ಷಿಯೆಂಬಂತೆ ಒಂದು ವಿಡಿಯೋ ಆತನಿಗೆ ಸಿಗುತ್ತದೆ. ಅಲ್ಲಿಗೆ ಗಂಡ ಶಂಕರ್‌ಗೆ ಹೆಂಡತಿಯ ಮೇಲಿದ್ದ ಅನುಮಾನ ಸ್ಪಷ್ಟವಾಗಿದೆ. ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ. ಪತ್ನಿಯ ಅಕ್ರಮ ಸಂಬಂಧ ವಿಡಿಯೋ ಪತಿಯ ಮೊಬೈಲ್‌ಗೆ ಪತ್ನಿ ಕಳುಹಿಸಿದ್ದು ಮಾತ್ರವಲ್ಲದೇ ಪತ್ನಿ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದ ವ್ಯಕ್ತಿ ಕೂಡ ಶಂಕರ್‌ಗೆ ಪತ್ನಿಯ ವಿಡಿಯೋವನ್ನು ಕಳುಹಿಸಿದ್ದ. ಈ ವಿಚಾರವಾಗಿ ಕಳೆದ 15 ದಿನದಿಂದ ನಿರಂತರವಾಗಿ ಗಲಾಟೆ ನಡೆಯುತ್ತಿತ್ತು. ಇದನ್ನೂ ಓದಿ: ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

ಪತ್ನಿ ಗೀತಾಳಿಗೆ ಇವೆಲ್ಲಾ ಬಿಟ್ಟು ಸರಿಯಾಗುವಂತೆ ಪತಿ ಶಂಕರ್ ಎಷ್ಟೇ ಹೇಳಿದರು ಕಿವಿಗೆ ಹಾಕಿಕೊಳ್ಳದೆ ಆಕೆ ಚಾಳಿ ಮುಂದುವರೆಸಿದ್ದಳು. ಇದರಿಂದ ರೊಚ್ಚಿಗೆದ್ದ ಪತಿ ಶಂಕರ್ ತನ್ನ ತಾಯಿಗೆ ಕರೆ ಮಾಡಿ ಮಗನನ್ನು ನೋಡಿಕೋ, ನಾನು ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಹೇಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಚಂದ್ರಲೇಔಟ್ (Chandra Layout) ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಬಿಇ ಪದವೀಧರೆ ಆತ್ಮಹತ್ಯೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article