ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election) ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಅವರು ಹೇಳಿದ್ದಾರೆ.
ಜೆಡಿಎಸ್-ಬಿಜೆಪಿ (JDS-BJP) ದೋಸ್ತಿ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ಪೂರಕವಾಗಿಯೇ ಕುಮಾರಸ್ವಾಮಿ (Kumaraswamy) ಮತ್ತು ಬಿಜೆಪಿಗರ ನಡೆನುಡಿಗಳು ಇವೆ. ಈಗ ಇದಕ್ಕೆ ಮತ್ತೊಮ್ಮೆ ಬ್ರೇಕ್ ಹಾಕಲು ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರು ಯತ್ನಿಸಿದ್ದಾರೆ. ಇದನ್ನೂ ಓದಿ: ಯಾರು ಯಾರಿಗೂ ಪತ್ರ ಬರೆದಿಲ್ಲ – ಇದೆಲ್ಲಾ ಊಹಾಪೋಹದ ಸುದ್ದಿ: ಡಿಕೆಶಿ
ಸದನದಲ್ಲಿ ಮಾತಾಡಿದ ಮಾತ್ರಕ್ಕೆ ಎರಡು ಪಕ್ಷಗಳು ಒಂದುಗೂಡಿದಂತಲ್ಲ. ಬೆಂಗಳೂರಿನ ಐಎನ್‍ಡಿಐಎ (INDIA) ಸಭೆಗೆ ಸ್ಥಳೀಯ ಕಾಂಗ್ರೆಸ್‍ನ (Congress) ಒಂದು ಗುಂಪಿನ ವಿರೋಧದ ಕಾರಣ ತಮ್ಮ ಪಕ್ಷಕ್ಕೆ ಆಹ್ವಾನ ಬರಲಿಲ್ಲ ಎಂಬ ವಿಚಾರವನ್ನು ದೇವೇಗೌಡರು ಸ್ಪಷ್ಟಪಡಿಸಿದರು.
ಇದೇ ವೇಳೆ, ಬಿಜೆಪಿಗರು ಯತ್ನಾಳ್‍ರನ್ನು ವಿಪಕ್ಷ ನಾಯಕರನ್ನಾಗಿ, ಸಿಟಿ ರವಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದಾರೆ ಎಂದು ತಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]