ಗೃಹಲಕ್ಷ್ಮಿ ನೋಂದಣಿ ವೇಳೆ ಹಣ ವಸೂಲಿ – 3 ಸೈಬರ್ ಕೇಂದ್ರ ಮಾಲೀಕರ ವಿರುದ್ಧ ಕೇಸ್

Public TV
1 Min Read
Raichur

ರಾಯಚೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಲಾಭ ಪಡೆದುಕೊಳ್ಳಲು ಮಹಿಳೆಯರು ಇದೀಗ ನೋಂದಣಿಗೆ (Registration) ಮುಂದಾಗಿದ್ದಾರೆ. ಆದರೆ ಕೆಲ ಸೈಬರ್ ಕೇಂದ್ರಗಳಲ್ಲಿ (Cyber ​​Centres) ನೋಂದಣಿ ಮಾಡಿಸಿಕೊಳ್ಳುವ ವೇಳೆ ಜನರಿಂದ ಹಣ ವಸೂಲಿ ಮಾಡಿರುವುದು ತಿಳಿದುಬಂದಿದೆ. ಇದೇ ರೀತಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ರಾಯಚೂರಿನಲ್ಲಿ (Raichur) 3 ಸೈಬರ್ ಕೇಂದ್ರಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

cyber

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಕೆಲ ಸೈಬರ್ ಕೇಂದ್ರಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿತ್ತು. ಜನರಿಂದ ಪ್ರತಿ ಗೃಹಲಕ್ಷ್ಮಿ ನೋಂದಣಿಗೆ 100 ರಿಂದ 200 ರೂ. ವರೆಗೆ ವಸೂಲಿ ಮಾಡುತ್ತಿದ್ದರು. ಸೋಮವಾರ ಮಾನ್ವಿ ತಹಶೀಲ್ದಾರ್ ಎಲ್‌ಡಿ ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಹಣ ವಸೂಲಿ ಮಾಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ – ಉಕ್ಕಿ ಹರಿದ ಕಾವೇರಿ ನದಿ; ಬಡಾವಣೆ ಜಲಾವೃತ

ಗ್ರಾಮ ಒನ್ ಕೇಂದ್ರದ ಐಡಿ, ಪಾಸ್‌ವರ್ಡ್ ಬಳಸಿಕೊಂಡು ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದುದು ತಿಳಿದುಬಂದಿದೆ. ಇದೀಗ ಪಟ್ಟಣದ ಎಕ್ಸೆಲ್ ಕಂಪ್ಯೂಟರ್ಸ್, ಲಕ್ಷ್ಮಿ ಕಂಪ್ಯೂಟರ್ಸ್ ಹಾಗೂ ಸೂರ್ಯ ಕಂಪ್ಯೂಟರ್ಸ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇನಲ್ಲಿ ಶೀಘ್ರವೇ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article