ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 5 TMC ನೀರಿನ ಒಳಹರಿವು

Public TV
1 Min Read
Tungabhadra Dam 2

ವಿಜಯನಗರ: ಕಲ್ಯಾಣ-ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ 59,500 ಕ್ಯೂಸೆಕ್ ನೀರು ಒಳಹರಿವಿದ್ದು, ಕಳೆದ 24 ಗಂಟೆಯಲ್ಲಿ 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ.

ಸಂಪೂರ್ಣ ಖಾಲಿಯಾಗಿದ್ದ ಜಲಾಶಯ ನೀರಿನಿಂದ ಭರ್ತಿಯಾಗಿರುವುದು ಕಂಡು ಜನರು ಹರ್ಷಗೊಂಡಿದ್ದಾರೆ. ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ 5 ಟಿಎಂಸಿಗೂ ಅಧಿಕ ಪ್ರಮಾಣದ ನೀರು (Water Level) ಹರಿದುಬಂದಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿದ್ದ ಸೇತುವೆಯಲ್ಲೇ ಪಿಕಪ್ ಚಾಲನೆ!

TungabhadraDam

ಶನಿವಾರ 16.649 TMCನಷ್ಟಿದ್ದ ನೀರಿನ ಸಂಗ್ರಹ ಭಾನುವಾರವಾದ ಇಂದು 21.356 ಟಿಎಂಸಿಗೆ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣವೂ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ 54,657 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಪ್ರತಿ ದಿನ 41,572 ಕ್ಯೂಸೆಕ್ ನೀರು ಸದ್ಯ ಜಲಾಶಯ ಹರಿದು ಬರುತ್ತಿದೆ. ಇದನ್ನೂ ಓದಿ: ಭಾರೀ ಮಳೆ – ತುಂಬಿ ಹರಿಯುತ್ತಿದೆ ಮೂಕನಮನೆ ಜಲಪಾತ; ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ಇನ್ನೂ ಕಲ್ಯಾಣ ಕರ್ಣಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ (Rain) ಸುರಿಯುತ್ತಿದ್ದು, ಆದಷ್ಟು ಬೇಗ ನೀರು ಹರಿದು ಜಲಾಶಯ ತುಂಬಬೇಕು ಎನ್ನುವುದು ರೈತರ ಆಶಯ. ಜಲಾಶಯ ಪೂರ್ಣಗೊಂಡರೆ ಇಲ್ಲಿನ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಹೀಗಾಗಿ ಇನ್ನೂ ಹೆಚ್ಚಿನ ಮಳೆಯಾಗಬೇಕೆನ್ನುವುದು ರೈತರ ಆಶಯವಾಗಿದೆ.

Web Stories

Share This Article