ಮೊಘಲ್ ಸ್ಟೈಲ್‌ನ ಮಟನ್ ಕಡೈ ಚಪ್ಪರಿಸಿ ನೋಡಿ

Public TV
2 Min Read
Mutton Kadai 1

ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ನಾನ್ ವೆಜ್ ಪ್ರಿಯರಿಗಾಗಿ. ಅದರಲ್ಲೂ ಹೆಚ್ಚಾಗಿ ಮಟನ್ ಪ್ರಿಯರಿಗಾಗಿ. ಮಟನ್ ಬಳಸಿ ಯಾವಾಗಲೂ ಒಂದೇ ರೀತಿಯ ಖಾದ್ಯ ಇಲ್ಲವೇ ಗ್ರೇವಿ ಮಾಡಿ ಬೋರ್ ಎನಿಸಿದ್ದರೆ ಒಮ್ಮೆ ಮಟನ್ ಕಡೈ ಟ್ರೈ ಮಾಡಿ ನೋಡಿ. ವಿಶೇಷ ಎಂದರೆ ಇದು ಮೊಘಲ್ ಶೈಲಿಯದ್ದಾಗಿದೆ. ಸಖತ್ ರುಚಿಯಾದ ಮಟನ್ ಕಡೈಯನ್ನು ಪ್ರತಿಯೊಬ್ಬರೂ ಚಪ್ಪರಿಸಿ ಸವಿಯುತ್ತಾರೆ. ಮಟನ್ ಕಡೈ ಮಾಡೋ ವಿಧಾನ ಇಲ್ಲಿದೆ.

Mutton Kadai

ಬೇಕಾಗುವ ಪದಾರ್ಥಗಳು:
ಮಟನ್ – 500 ಗ್ರಾಂ
ಹೆಚ್ಚಿದ ಈರುಳ್ಳಿ – 4
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 3
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 10
ಸಣ್ಣಗೆ ಹೆಚ್ಚಿದ ಟೊಮೆಟೋ – 3
ಅನಾರ್ದನ ಪುಡಿ – 2 ಟೀಸ್ಪೂನ್
ಮೊಸರು – 100 ಗ್ರಾಂ
ಅರಿಶಿನ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಕರಿಮೆಣಸಿನ ಪುಡಿ – 1 ಟೀಸ್ಪೂನ್
ದಾಲ್ಚಿನ್ನಿ ಎಲೆ – 1
ಜೀರಿಗೆ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

Mutton Kadai 2

ಮಾಡುವ ವಿಧಾನ:
* ಮೊದಲಿಗೆ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ದಾಲ್ಚಿನ್ನಿ ಎಲೆ, ಜೀರಿಗೆ ಸೇರಿಸಿ, ಅದು ಸಿಡಿದ ಬಳಿಕ ಮಟನ್ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ.
* ಬಳಿಕ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಟೊಮೆಟೋ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
* ಉಳಿದ ಮಸಾಲೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ ಕುಕ್ಕರ್ ಮುಚ್ಚಳ ಮುಚ್ಚಿ, 5-7 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಹಬೆ ತಣಿದ ಬಳಿಕ ಜಾಗರೂಕತೆಯಿಂದ ಮುಚ್ಚಳ ತೆಗೆದು ಮಿಶ್ರಣವನ್ನು ಕಡೈಗೆ ವರ್ಗಾಯಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ.
* ಬಳಿಕ ಅನಾರ್ದನ ಹಾಗೂ ಮೊಸರು ಸೇರಿಸಿ ಬೆರೆಸಿಕೊಳ್ಳಿ.
* ಎಣ್ಣೆ ಬೇರ್ಪಡುವವರೆಗೆ ಸುಮಾರು 20-25 ನಿಮಿಷ ಬೇಯಿಸಿಕೊಳ್ಳಿ.
* ಇದೀಗ ಮೊಘಲ್ ಸ್ಟೈಲ್‌ನ ಮಟನ್ ಕಡೈ ತಯಾರಾಗಿದ್ದು, ರೋಟಿ, ಅನ್ನದೊಂದಿಗೆ ಚಪ್ಪರಿಸಿ. ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ಮಾಡಿ ಟೇಸ್ಟಿ ಕೋಕನಟ್ ಸಿಗಡಿ

Web Stories

Share This Article