Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

Public TV
Last updated: July 21, 2023 7:01 pm
Public TV
Share
3 Min Read
RISHAB SHETTY 2
SHARE

ಕುಂದಾಪುರದಲ್ಲಿ (Kundapura) ಎಷ್ಟು ಸೊಬಗಿದೆಯೋ ಅಷ್ಟೇ ಸೊಬಗಿನ ಸೊಗಡು ಆ ಭಾಷೆಯಲ್ಲೂ ಇದೆ. ಕುಂದಾಪುರ ಭಾಷೆ ಬದುಕನ್ನು ಪ್ರಚುರಪಡಿಸಲು ವಿಶ್ವಕುಂದಾಪ್ರ ಕನ್ನಡ ದಿನವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಕುಂದಾಪ್ರ ಕನ್ನಡ ಹಬ್ಬ(Vishwa Kundapra Kannada) ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಐದನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ ಕುಂದಾಪ್ರ ಕನ್ನಡ ಹಬ್ಬ ಜುಲೈ 23ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅತ್ತಿಗುಪ್ಪೆಯಲ್ಲಿರುವ ಬಂಟರ ಭವನದಲ್ಲಿ ನಡೆಯಲಿದೆ. ಇದನ್ನೂ ಓದಿ:ಸಪ್ತ ಸಾಗರದಾಚೆ ಎಲ್ಲೋ ‘ಹೋರಾಟ’ ಮಾಡುತ್ತಿರುವ ರಕ್ಷಿತ್ ಶೆಟ್ಟಿ

vishwa kundapura kannada dina

ಜುಲೈ 23ರಂದು ಬೆಳಗ್ಗೆ 9ಗಂಟೆಗೆ ಕಾರ್ಯಕ್ರಮವನ್ನು ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ಕ್ಷೇತ್ರದ ಸಾಧಕರಾದ ಶಾಂತರಾಮ ಶೆಟ್ಟಿ ಬಾರ್ಕೂರು ಇವರು ಉದ್ಘಾಟಿಸಲಿದ್ದಾರೆ. ಶಾಸಕರಾದ ಕಿರಣ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆಯವರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaih) ಉಪಸ್ಥಿತಿ ಇರಲಿದ್ದು, ಶಾಸಕರಾದ ಎಂ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆಯವರು, ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಎಂ.ಮುರಳೀಧರ ಹೆಗ್ಡೆಯವರ ಉಪಸ್ಥಿತಿ ಇರಲಿದೆ. ಇದೇ ಸಂದರ್ಭದಲ್ಲಿ ಕುಂದಾಪುರದ ಹಿರಿಮೆಯನ್ನು ಇನ್ನಷ್ಟು ವಿಸ್ತರಿಸಿದ ಸಾಧಕರಾದ ಪ್ರೊ. ಎ.ವಿ ನಾವಡ ಮತ್ತು ಸಂಗೀತ ನಿರ್ದೇಶಕರಾದ ರವಿ ಬಸ್ರೂರು (Ravi Basruru) ಇವರುಗಳು ಊರ ಗೌರವಕ್ಕೆ ಭಾಜನರಾಗಲಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) , ಪ್ರಮೋದ್ ಶೆಟ್ಟಿ (Pramod Shetty) ಇನ್ನಿತರರು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ. ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿ ಭಾಗದವರಾಗಿದ್ದು, ವಿಶ್ವಕುಂದಾಪ್ರ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಕಾಂತಾರ 2 RISHAB SHETTY

ತಮ್ಮ ಮಾತೃಭಾಷೆಯಾದ ಕುಂದಗನ್ನಡದ ಮೇಲಿನ ಪ್ರೀತಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿದ ಅಭಿಮಾನದ ಕಿಡಿಯೊಂದು ಇಂದು ವಿಶ್ವದಗಲ ಹಬ್ಬಿರುವ ಪರಿಯು ಭಾಷೆಯೊಂದರ ಅಪರಿಮಿತ ಸಾಧ್ಯತೆಯನ್ನು ಎತ್ತಿಹಿಡಿಯುತ್ತದೆ. ಸಮಾನಮನಸ್ಕ ಗೆಳೆಯರ ಸಾರಥ್ಯದಲ್ಲಿ ಆಯೋಜನೆಯಾಗುತ್ತಾ ಬಂದ ಈ ದಿನಾಚರಣೆಯು ಈ ಬಾರಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಇದರ ಅಡಿಯಲ್ಲಿ ಆಯೋಜನೆಯಾಗಿದೆ. ಇದು ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಜೊತೆಗೆ ಇಲ್ಲಿ ನೆಲೆಸಿರುವ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ.

ಬೆಂಗಳೂರಿನಲ್ಲಿ ಲಕ್ಷಾಂತರ ಕುಂದಗನ್ನಡಿಗರಿದ್ದು ತಮ್ಮ ತಾಯಿಬೇರಿನ ಜತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ಕುಂದಾಪ್ರಕನ್ನಡ ಹಬ್ಬವು ಹೊಂದಿದೆ. ಈ ಸಂಭ್ರಮದ ಹಾದಿಯಲ್ಲಿ ಕಳೆದ ವರ್ಷ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಆರಂಭಗೊಂಡಿದ್ದು, ಸಮಸ್ತ ಕುಂದಗನ್ನಡಿಗರಿಗೆ ಹೆಮ್ಮೆಯ ವಿಷಯ.

ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದ್ದು ಮುಖ್ಯವಾಗಿ ರಾಘವೇಂದ್ರ ಜನ್ಸಾಲೆಯವರ ನೇತೃತ್ವದಲ್ಲಿ ಸಿದ್ಧಪ್ರಸಿದ್ಧ ಕಲಾವಿದರಿಂದ ಬೇಡರ ಕಣ್ಣಪ್ಪ ಎನ್ನುವ ಯಕ್ಷಗಾನ ಪ್ರಸಂಗ, ಕಲಾಕದಂಬ ಆರ್ಟ್ಸ್ ಅವರಿಂದ ವೀರ ಬರ್ಬರಿಕ ಯಕ್ಷಗಾನ ಪ್ರಸಂಗ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ! ಎನ್ನುವ ನೃತ್ಯ ರೂಪಕ, ಕಿರುತೆರೆಯ ಖ್ಯಾತಿಯ ಶ್ರಾವ್ಯ ಮರವಂತೆ, ಸಮೃದ್ಧಿ ಕುಂದಾಪುರ, ಪ್ರೀತಂ ಅವರುಗಳು ಚಿತ್ರಪಟ ರಾಮಾಯಣ ಎಂಬ ಕಿರುನಾಟಕದ ಮೂಲಕ ರಂಜಿಸಲಿದ್ದಾರೆ. ಸಾಸ್ತಾನದ ಖ್ಯಾತ ನಾಟಕ ತಂಡ ಅಲ್ವಿನ್ ಅಂದ್ರಾದೆ ಮತ್ತು ಸಹಕಲಾವಿದರ ತಿಳಿ ಹಾಸ್ಯ ಪ್ರಹಸನ, ಟೀಂ ಕುಂದಾಪುರಿಯನ್ಸ್ ಅವರು ಮಿಂಚುಳ- ಇದ್ ಕತ್ಲಿ-ಬೆಳಗಿನ ಕಥಿ ಎಂಬ ವಿಶೇಷ ನಾಟಕವನ್ನು ನೆರೆದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಮತ್ತು ಕನಸ್ಸಿನ ಕುಂದಾಪುರ ಕುರಿತಾಗಿ ಪ್ರದರ್ಶಿಸಲಿದ್ದಾರೆ.

ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್, ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು, ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಕುಂದಾಪ್ರ ಕನ್ನಡ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಕುಂದಾಪ್ರ ಕನ್ನಡ ದಿನಾಚರಣೆಗೆ ಕಳೆದ ಬಾರಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು, ಹಿಂದಿನ ಬಾರಿಯ ಯಶಸ್ಸು ಈ ಬಾರಿ ನಮ್ಮ ನಿರೀಕ್ಷೆಯನ್ನು ಮತ್ತಷ್ಟು ಹಿರಿದಾಗಿಸಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:cm siddaramaiahKantaraPramod Shettyrishab shettysandalwoodvishwa kundapra kannada dinaಪ್ರಮೋದ್ ಶೆಟ್ಟಿರಿಷಬ್ ಶೆಟ್ಟಿವಿಶ್ವ ಕುಂದಾಪ್ರ ಕನ್ನಡ ದಿನಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

karunya ram
ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ
19 minutes ago
RAGINI 4
‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್
2 hours ago
Madenuru Manu
ನಟ ಮಡೆನೂರು ಮನು ರೇಪ್ ಕೇಸ್ – 31 ತಿಂಗಳ ವಾಟ್ಸಾಪ್ ಚಾಟ್ ಪಡೆದಿರೋ ಪೊಲೀಸರು
3 hours ago
Pruthvi Ambaar
‘ಚೌಕಿದಾರ್’ ಚಿತ್ರದ ಟೀಸರ್ ರಿಲೀಸ್- ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್ ಅಬ್ಬರ
3 hours ago

You Might Also Like

School
Bengaluru City

ಕೋವಿಡ್ ಮಧ್ಯೆ ಶಾಲಾ ಕಾಲೇಜುಗಳು ಆರಂಭ – ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್!

Public TV
By Public TV
2 minutes ago
Uttarakhand Rain Landslides Traffic 1
Latest

ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್‌

Public TV
By Public TV
11 minutes ago
FASHION DRESS
Fashion

ಮಳೆಗಾಲದಲ್ಲೂ ಫ್ಯಾಷನೆಬಲ್ ಆಗಿ ಕಾಣಲು ಮಹಿಳೆಯರಿಗೆ ಯಾವ ಬಟ್ಟೆ ಸೂಕ್ತ?

Public TV
By Public TV
41 minutes ago
UT Khader 1
Bengaluru City

ಬಿಜೆಪಿ 18 ಶಾಸಕರ ಅಮಾನತು ವಾಪಸ್‌

Public TV
By Public TV
51 minutes ago
Tej Pratap Yadav
Latest

ನೈತಿಕ ಮೌಲ್ಯಗಳ ಕೊರತೆ – ಆರ್‌ಜೆಡಿಯಿಂದ ಪುತ್ರ ತೇಜ್ ಪ್ರತಾಪ್‌ರನ್ನ ಹೊರದಬ್ಬಿದ ಲಾಲು ಪ್ರಸಾದ್‌ ಯಾದವ್‌

Public TV
By Public TV
55 minutes ago
RAVE PARTY
Chikkaballapur

ದೇವನಹಳ್ಳಿ ಬಳಿಯ ಫಾರ್ಮ್‌ ಹೌಸ್‌ನಲ್ಲಿ ರೇವ್‌ ಪಾರ್ಟಿ – 4 ಜನ ಅರೆಸ್ಟ್‌

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?