KSRTC ನೌಕರ ಆತ್ಮಹತ್ಯೆ – ಮ್ಯಾನೇಜರ್ ಕಿರುಕುಳ ಆರೋಪ

Public TV
1 Min Read
DEATH 3

ಕೋಲಾರ: ಕೆಎಸ್‍ಆರ್‌ಟಿಸಿ (KSRTC) ಡಿಪೋ ನೌಕರನೊಬ್ಬ ತನ್ನ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಿವಾಸಪುರದ ಉಪ್ಪುಕುಂಟೆ ಗ್ರಾಮದಲ್ಲಿ ನಡೆದಿದೆ.

ಸೋಮಾಚಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತ ಶ್ರೀನಿವಾಸಪುರ (Srinivasapur) ಸಾರಿಗೆ ಸಂಸ್ಥೆಯ ಬಸ್ (Bus) ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ. ಬಳಿಕ ಕಂಡಕ್ಟರ್ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಡಿಪೋದಲ್ಲಿಯೇ ಕೆಲಸಕ್ಕೆ ನಿಯೋಜನೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಂಗಳೂರಲ್ಲಿ ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಡ್ರಗ್ಸ್ ಚಾಕ್ಲೇಟ್ ಮಾರಾಟ- ಇಬ್ಬರು ವಶಕ್ಕೆ

ರೋಗಕ್ಕೆ ತುತ್ತಾಗಿದ್ದರೂ ಸೋಮಾಚಾರಿಯಿಂದ ಮಾಡಲು ಸಾಧ್ಯವಾಗದ ಕೆಲಸ ನೀಡುವ ಮೂಲಕ ಡಿಪೋ ಮ್ಯಾನೇಜರ್ ವೆಂಕಟೇಶ್ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೇಲಾಧಿಕಾರಿಯ ಕಿರುಕುಳದ ಬಗ್ಗೆ ತನ್ನ ಬಳಿ ಹೇಳಿಕೊಂಡಿದ್ದರು ಎಂದು ಮೃತ ಕಂಡಕ್ಟರ್ ಪತ್ನಿ ಧನಲಕ್ಷ್ಮೀ ಹೇಳಿದ್ದಾರೆ.

ಈ ಸಂಬಂಧ ಶ್ರೀನಿವಾಸಪುರ ಠಾಣಾ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಾನಹಾನಿ ಕೇಸ್‌ನಲ್ಲಿ ಜೈಲು ಶಿಕ್ಷೆ – ಸುಪ್ರೀಂ ಕೋರ್ಟ್‌ನಲ್ಲೂ ರಾಹುಲ್ ಗಾಂಧಿಗೆ ಹಿನ್ನಡೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article