ಮಹಾಘಟಬಂಧನ್ ಸಭೆಗೆ IAS ಅಧಿಕಾರಿಗಳ ಬಳಕೆ ಅತ್ಯಂತ ಕೆಟ್ಟ ಸಂಪ್ರದಾಯ: ಹೆಚ್‍ಡಿಕೆ

Public TV
1 Min Read
HDK 2 1

ರಾಮನಗರ: ಮಹಾಘಟಬಂಧನ್ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿಚಾರ ಸಂಬಂಧ ಚನ್ನಪಟ್ಟಣದಲ್ಲಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ. ಒಂದು ಪಕ್ಷದ ರಾಜಕೀಯ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳ ಬಳಕೆ ಸರಿಯಲ್ಲ. ಸರ್ಕಾರ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿ ಎಲ್ಲಾದ್ರಲ್ಲೂ ರಾಜಕೀಯ ಮಾಡ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಗುಡುಗಿದ ಅವರು, ಈವಾಗ ಏನು ಮಾಡ್ತಿದ್ದಾರೆ.? ಈಗ ಮಾಡ್ತಿರೋದು ರಾಜಕೀಯವೋ, ಅಥವಾ ರಾಜ್ಯದ ಅಭಿವೃದ್ಧಿಯೋ ಎಂದು ಟಾಂಗ್ ನೀಡಿದ್ರು. ಅವರ ರಾಜಕೀಯ ಸಂಘಟನೆಗೆ ಹಿರಿಯ ಅಧಿಕಾರಿಗಳ ಬಳಕೆ ಮಾಡಿದ್ದಾರೆ. ಕಳೆದ 40ವರ್ಷಗಳ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮ. ಬೇರೆ ಪಕ್ಷದ ನಾಯಕರ ಸ್ವಾಗತ ಕೋರಕು ಬೇಕಿದ್ರೆ ಸಚಿವರು, ಸಂಸದರು ಹೋಗಲಿ. ಆದರೆ ಅಧಿಕಾರಿಗಳ ಕಳಿಸುವ ಮೂಲಕ ಕೆಟ್ಟ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಅಧಿಕಾರಿಗಳ ಪಕ್ಷದ ಕಾರ್ಯಕರ್ತರ ರೀತಿ ಬಳಕೆ ಮಾಡಿರೋದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷ ನಾಯಕನಾಗಲು ಹೆಚ್‍ಡಿಕೆ ಹೀಗೆ ಅರೋಪ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನಿರೋದೇ ವಿರೋಧ ಪಕ್ಷದಲ್ಲಿ. ನಮ್ಮತ್ರ ಇರೋದು ಕೇವಲ 19 ಸದಸ್ಯರು. ಬಿಜೆಪಿಯವರು 65 ಸ್ಥಾನ ಗೆದ್ದಿದ್ದಾರೆ. ನನಗೂ ವಿರೋಧ ಪಕ್ಷದ ಸ್ಥಾನಕ್ಕೂ ಸಂಬಂಧ ಇಲ್ಲ ಎಂದರು. ಇದನ್ನೂ ಓದಿ: ಟೊಮೆಟೋ ಬೆಳೆದು ಒಂದೇ ತಿಂಗಳಲ್ಲಿ ಕೋಟಿ-ಕೋಟಿ ಬಾಚಿದ ರೈತ – ದಂಪತಿ ಫುಲ್‌ ಖುಷ್‌

Web Stories

Share This Article