2026ರ ಕಾಮನ್‌ವೆಲ್ತ್‌ ಕ್ರೀಡಾಕೂಟ ಆತಿಥ್ಯದಿಂದ ಹಿಂದೆ ಸರಿದ ಆಸ್ಟ್ರೇಲಿಯಾ

Public TV
2 Min Read
Australia 2

ಮೆಲ್ಬರ್ನ್‌: 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟ (Commonwealth Games 2026) ಆಥಿತ್ಯದಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು (Victoria State)  ಹಿಂದೆ ಸರಿದಿದೆ.

ಕ್ರೀಡಾಕೂಡ ಆಯೋಜನೆಗೆ ಕನಿಷ್ಠ 2 ಶತಕೋಟಿ ಆಸ್ಟ್ರೇಲಿಯನ್‌ ಡಾಲರ್‌ (1.36 ಶತಕೋಟಿ ಯುಎಸ್‌ ಡಾಲರ್‌), ಅತ್ಯದ್ಭುತವಾಗಿ ನಡೆಸುತ್ತೇವೆ ಅಂದ್ರೆ ಸುಮಾರು 7 ಶತಕೋಟಿ ಡಾಲರ್‌ನಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ವಿಕ್ಟೋರಿಯಾ ಆತಿಥ್ಯದಿಂದ ಹಿಂದೆ ಸರಿದೆ ಎಂದು ಮೆಲ್ಬರ್ನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರಧಾನ ಅಧಿಕಾರಿ ಡೇನಿಯಲ್‌ ಆಂಡ್ರ್ಯೂಸ್‌ (Daniel Andrews0 ತಿಳಿಸಿದ್ದಾರೆ. ಇದನ್ನೂ ಓದಿ: ಅಲ್ಕರಾಝ್‌ಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ – ಸೋಲಿಸಿದ ಆಟಗಾರನನ್ನೇ ಬಾಯ್ತುಂಬ ಹೊಗಳಿದ ದಿಗ್ಗಜ ಜೊಕೊವಿಕ್!

Australia

ಕಳೆದ ಬಾರಿ ಮಂಡಿಸಿದ ವಾರ್ಷಿಕ ಬಜೆಟ್‌ಗಿಂತಲೂ ಮೂರು ಪಟ್ಟು ಹೆಚ್ಚಿನ ಹಣ ಈ ಕಾರ್ಯಕ್ರಮಕ್ಕೆ ಬೇಕಾಗುತ್ತದೆ. ಅದಕ್ಕಾಗಿ ಆಸ್ಪತ್ರೆ ಮತ್ತು ಶಾಲೆಗಳಿಗೆ ಮೀಸಲಾದ ಹಣವನ್ನ ತೆಗೆಯಲಾಗುವುದಿಲ್ಲ. ಆದ್ದರಿಂದ 2026ರಲ್ಲಿ ವಿಕ್ಟೋರಿಯಾದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ಆಯೋಜನೆ ಮಾಡುವುದಿಲ್ಲ. ಈ ಒಪ್ಪಂದವನ್ನು ಅಂತ್ಯಗೊಳಿಸುವಂತೆ ಕಾಮನ್‌ವೆಲ್ತ್‌ ಕ್ರೀಡಾಕೂಡಕ್ಕೆ ತಿಳಿಸಲು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಆಂಡ್ರ್ಯೂಸ್‌ ತಿಳಿಸಿದ್ದಾರೆ. ಇದನ್ನೂ ಓದಿ: RCB ಏಕೆ ಐಪಿಎಲ್‌ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್‌

Commonwealth Games 2022 9

ಕಾಮನ್‌ ವೆಲ್ತ್‌ ಕ್ರೀಡಾಕೂಟವು 20 ಕ್ರೀಡೆಗಳು ಮತ್ತು 26 ವಿಭಾಗಗಳನ್ನ ಒಳಗೊಂಡಿರುತ್ತದೆ. ವಿಕ್ಟೋರಿಯಾದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಸಲು ಗೀಲಾಂಗ್, ಬಲ್ಲರಾಟ್, ಬೆಂಡಿಗೊ, ಗಿಪ್ಸ್‌ಲ್ಯಾಂಡ್ ಮತ್ತು ಶೆಪ್ಪರ್ಟನ್ ಪ್ರಾದೇಶಿಕ ಕೇಂದ್ರಗಳನ್ನು ಒಳಗೊಂಡಿದೆ. ಆಂಡ್ರ್ಯೂಸ್‌ ಆತಿಥ್ಯ ನಿರಾಕರಿಸಲು ನಿರ್ಧಾರ ಪ್ರಕಟಿಸಿದ ನಂತರ ಆಸೀಸ್‌ ರಾಜಧಾನಿ ಮೇಲ್ಬರ್ನ್‌ನಲ್ಲಿ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಯಿತು. ಅದು ಸಾಧ್ಯವಾಗದ ನಂತರ 2 ಶತಕೋಟಿ ಡಾಲರ್‌ಗಳ ಕಡಿಮೆ ವೆಚ್ಚದ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಈ ಬಗ್ಗೆ ವಿಕ್ಟೋರಿಯಾ ರಾಜ್ಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅದ್ಯ ಮಾತುಕತೆ ಮುಂದುವರಿದಿದೆ.

ಈ ನಡುವೆ ವಿಕ್ಟೋರಿಯಾ ಕ್ರೀಡಾ ಇಲಾಖೆ ವಿರುದ್ಧ ಆಕ್ಷೇಪಗಳು ಕೇಳಿಬರುತ್ತಿವೆ. ಕ್ರೀಡಾಕೂಟ ಆಯೋಜನೆ ಮಾಡೋದಿಲ್ಲ ಎನ್ನುತ್ತಿರುವುದು ವಿಕ್ಟೋರಿಯಾ ರಾಣಿಗೆ ಮಾಡುತ್ತಿರುವ ಅವಮಾನ, ಕಾಮನ್‌ವೆಲ್ತ್‌ ಕ್ರೀಡಾಕೂಟ ಸಮಿತಿಗೂ ಇದರಿಂದ ನಿರಾಶೆಯಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ. ಕಳೆದ ಬಾರಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆದಿತ್ತು.

Web Stories

Share This Article