ತೆಲುಗಿನ ಕಿಲಾಡಿ, ಹಿಟ್ ಸಿನಿಮಾಗಳ ಮೂಲಕ ಗಮನ ಸೆಳೆದ ಯುವ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಅವರು ಗುಂಟೂರು ಖಾರಂ (Guntur Kaaram) ಸಿನಿಮಾದ ವಿಚಾರವಾಗಿ ಭಾರೀ ಸದ್ದು ಮಾಡ್ತಿದ್ದಾರೆ. ಮಹೇಶ್ ಬಾಬು ಸಿನಿಮಾ ಬಗ್ಗೆ ರಿಯಾಕ್ಟ್ ಮಾಡಿರೋ ನಾಯಕಿ ಮೀನಾಕ್ಷಿ, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲೀಕ್ ಆಗೋದ್ದಕ್ಕೂ ಮುಂಚೆಯೇ ಎಚ್ಚರ ವಹಿಸಿದ್ದಾರೆ. ಓಪನ್ ವೇದಿಕೆಯಲ್ಲಿ ನೋ ಲೀಕ್ಸ್ ಅಂತಾ ನಟಿ ಪ್ರತಿಕ್ರಿಯಿಸಿದ್ದಾರೆ.
‘ಸರ್ಕಾರು ವಾರಿ ಪಾಟ’ ಸಿನಿಮಾದ ಸಕ್ಸಸ್ ನಂತರ ಮಹೇಶ್ ಬಾಬು (Mahesh Babu) ಗುಂಟೂರು ಖಾರಂ ಸಿನಿಮಾ ಎತ್ತಿಕೊಂಡಿರೋದು ಗೊತ್ತೆಯಿದೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಟಾಲಿವುಡ್ ಪ್ರಿನ್ಸ್‌ಗೆ ಪೂಜಾ ಹೆಗ್ಡೆ- ಶ್ರೀಲೀಲಾ ನಾಯಕಿಯಾಗಿದ್ದರು. ಟೀಮ್ ಜೊತೆ ಕಿರಿಕ್ ಮಾಡಿಕೊಂಡು ಪೂಜಾ ಹೆಗ್ಡೆ ಹೊರ ನಡೆದರು. ಅವರ ಮೀನಾಕ್ಷಿ ಎಂಟ್ರಿಯಾಗಿ ಎಂದು ಹೇಳಲಾಗಿತ್ತು. ಆದರೆ ಯಾವುದೇ ಅಧಿಕೃತ ಅಪ್‌ಡೇಟ್ ಸಿಕ್ಕಿರಲಿಲ್ಲ. ಈಗ ಸ್ವತಃ ನಟಿಯೇ ಈ ಬಗ್ಗೆ ಉತ್ತರಿಸಿದ್ದಾರೆ. ಇದನ್ನೂ ಓದಿ:ನಟಿ ಶುಭ ಪೂಂಜಾಗೆ ಜಿಜಿ ಕೇರ್ ಟೇಕರ್ ಆಗಿದ್ದೇಕೆ?: ಕಾಂಪೌಂಡರ್ ಕ್ಯಾರೆಕ್ಟರ್ ಸೀಕ್ರೆಟ್ ರಿವೀಲ್
ಇತ್ತೀಚೆಗೆ ಮೀನಾಕ್ಷಿ ಚೌಧರಿ ಅವರು ಸಿನಿಮಾವೊಂದರ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ವೇದಿಕೆ ಏರಿದ ಅವರಿಗೆ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಕೇಳಲಾಯಿತು. ಆ ಸಿನಿಮಾದಲ್ಲಿ ನಾನು ಇರುವುದು ಖುಷಿಯ ವಿಚಾರ. ನಾನು ಮೊದಲಿನಿಂದಲೂ ಮಹೇಶ್ ಬಾಬು ಅವರ ದೊಡ್ಡ ಅಭಿಮಾನಿ. ಈಗತಾನೇ ಮೊದಲ ಹಂತದ ಶೂಟಿಂಗ್ ಮುಗಿಸಿದ್ದೇವೆ. ಮೊದಲ ದಿನ ನನ್ನ ಭಾಗದ ಚಿತ್ರೀಕರಣ ಮಹೇಶ್ ಬಾಬು ಜೊತೆಗೆ ಇತ್ತು. ಈ ಅವಕಾಶ ನೀಡಿದ್ದಕ್ಕೆ ಮಹೇಶ್ ಬಾಬು, ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ (Trivikaram Srinivas) ಅವರಿಗೆ ಧನ್ಯವಾದಗಳು. ಅವರಿಬ್ಬರದ್ದು ಹಿಟ್ ಕಾಂಬಿನೇಷನ್ ಎಂದು ಮೀನಾಕ್ಷಿ ಅವರು ಖುಷಿಯಿಂದ ಮಾತನಾಡಿದ್ದಾರೆ.
ವೇದಿಕೆ ಮೇಲೆ ಮೀನಾಕ್ಷಿ ಚೌಧರಿ ಅವರು ಇನ್ನಷ್ಟು ಮಾತನಾಡಲಿ ಎಂಬುದು ಎಲ್ಲರ ಬಯಕೆ ಆಗಿತ್ತು. ನಿರೂಪಕಿ ಕೂಡ ಮೇಲಿಂದ ಮೇಲೆ ಪ್ರಶ್ನೆಗಳನ್ನ ಕೇಳುತ್ತಲೇ ಇದ್ದರು. ಆದರೆ ಜಾಸ್ತಿ ಬಾಯಿ ಬಿಟ್ಟರೆ ವಿಷಯ ಲೀಕ್ ಆಗುತ್ತದೆ ಎಂಬುದು ಮೀನಾಕ್ಷಿಗೆ ಅರ್ಥವಾಯ್ತು. ಹಾಗಾಗಿ ಅವರು ನೋ ಲೀಕ್ಸ್ ಎಂದು ಜೋರಾಗಿ ಹೇಳಿದರು. ಆ ಮೂಲಕ ಸಿನಿಮಾದ ಬಗೆಗಿನ ಯಾವುದೇ ಪ್ರಮುಖ ವಿಷಯಗಳನ್ನು ಅವರು ಬಿಟ್ಟುಕೊಟ್ಟಿಲ್ಲ. ವೇದಿಕೆಯಲ್ಲಿ ನೆಚ್ಚಿನ ನಟ ಮಹೇಶ್ ಬಾಬು ಜೊತೆ ಮಾತನಾಡಿದ್ದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಸಿನಿಮಾದ ಹೆಚ್ಚಿನ ಮಾಹಿತಿಗೆ ಮುಂದಿನ ದಿನಗಳವರೆಗೂ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]