ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ

Public TV
2 Min Read
kapil sharma 1

ಹಿಂದಿ ಕಿರುತೆರೆಯ ಜನಪ್ರಿಯ ಟಾಕ್ ಶೋ ಅಂದ್ರೆ ಅದು ಕಪಿಲ್ ಶರ್ಮಾ ನಿರೂಪಣೆಯ ‘ದಿ ಕಪಿಲ್ ಶರ್ಮಾ’ (The Kapil Sharma Show) ಕಾರ್ಯಕ್ರಮ. ಸಿನಿಮಾ ಪ್ರಚಾರದ ಜೊತೆ ನಗುವಿಗೆ ಲಗಾಮ್ ಇಲ್ಲದೆ ಖುಷಿಯಾಗಿ ಕಪಿಲ್ ನಿರೂಪಣೆ ಮಾಡುತ್ತಾರೆ. ಹೀಗಿರುವಾಗ ಸುಮೋನಾ ಚಕ್ರವರ್ತಿ(Sumona Chakravarthy) , ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಅದೊಮ್ಮೆ ತಾವು ಕಪಿಲ್ ಅವರ ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

kapil sharma

ಕಿರುತೆರೆಯ ನಂಬರ್ ಒನ್ ಕಪಿಲ್ ಶೋನಲ್ಲಿ ನಡೆದ ಘಟನೆ, ಅವಮಾನ ಬಗ್ಗೆ ನಟಿ ಮಾತನಾಡಿದ್ದಾರೆ. ನನಗೆ ಮೊದಲು ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ಡೈಲಾಗ್ ಆಕ್ಟ್ ಮಾಡುವಾಗ ಮರೆತಿದ್ದೆ. ಆಗ ಕಪಿಲ್ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು. ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ (Joke)  ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೂ ನಾನು ಮರೆತಿಲ್ಲ ಎಂದು ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಭೀಮನ ಅಮಾವ್ಯಾಸೆಗೆ ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ

sumona chakravarthy

ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಹೀಯಾಳಿಸಿದರೆ ಅದು ಅವಮಾನ ಆಗುತ್ತದೆ. ಕಪಿಲ್ ಶರ್ಮಾ (Kapil Sharma) ಅವರೊಂದಿಗೆ ತೆರೆಮರೆಯಲ್ಲಿ ತುಂಬಾ ತಮಾಷೆ ಮಾಡುತ್ತಾರೆ. ಆದರೆ ಅವರಿಗೆ ಎಲ್ಲವೂ ಹಾಸ್ಯವಾಗಿಯೇ ಕಾಣುವುದು ವಿಪರ್ಯಾಸ. ಏನೂ ಸಿಗದಾಗ ಅವರು ನನ್ನ ಶರೀರದ ಭಾಗವನ್ನು ಗೇಲಿ ಮಾಡಿದ್ದರು. ಕಪಿಲ್ ಕಾಮೆಂಟ್ ಬಗ್ಗೆ, ಎಲ್ಲರೂ ಆಡಿಕೊಳ್ಳುವಂತಾಗಿದೆ ಎಂದು ಸಂದರ್ಶನದಲ್ಲಿ ಕಪಿಲ್ ಸಹನಟಿ ಹೇಳಿದ್ದಾರೆ.

ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ಬಳಿಕ ನಮ್ಮ ಶೋನ, ಅರ್ಚನಾ ಪುರಣ್ ಸಿಂಗ್ ಅವರು ನನ್ನ ಬಳಿ ಬಂದು ಸಮಾಧಾನಿಸಿದರು. ಆದರೂ ಈ ಬಗ್ಗೆ ನನಗೆ ಬೇಸರವಿದೆ ಎಂದಿದ್ದಾರೆ. ಜೊತೆಗೆ ನಾನು ಮತ್ತು ಕಪಿಲ್ ಉತ್ತಮ ಸ್ನೇಹಿತರು ಎಂದು ಕೂಡ ನಟಿ ಸುಮೋನಾ ಮಾತನಾಡಿದ್ದಾರೆ.

Share This Article