ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್

Public TV
3 Min Read
SIDDRAMIHA AND HDKUMARASWAMY

– ಲೋಕಸಭೆಗೆ ಬಿಜೆಪಿ ದೋಸ್ತಿ ಬಗ್ಗೆ ಹೆಚ್‌ಡಿಕೆ ಮುಕ್ತ ಮಾತು

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮೆರೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್‌ನಿಂದ ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬಹಿರಂಗ ಸವಾಲ್ ಹಾಕಿದ್ದಾರೆ.

ನಗರದಲ್ಲಿಂದು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ಕಾಂಗ್ರೆಸ್‌ನಿಂದ (Congress) ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಒಗ್ಗಟ್ಟಿನ ರಣಕಹಳೆ- ಇಂದಿನಿಂದ 2 ದಿನ ವಿಪಕ್ಷಗಳ ಒಕ್ಕೂಟ ಸಭೆ

ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ವಿರುದ್ಧ ಮಾತನಾಡಿದ್ದಾರೆ. 123 ಸೀಟು ಬಂದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ರು. ಇನ್ನೂ ಮಾಡಿಲ್ಲ ಅಂತ ಮಾತಾಡಿದ್ದಾರೆ. ಕನ್ನಡದ ಬಗ್ಗೆ ಪಾಠ ಮಾಡೋ ಸಿದ್ದರಾಮಯ್ಯ ಅವರಿಗೆ ಕನ್ನಡ ಗೊತ್ತಿದೆಯಾ? ವಿಧಾನಸಭೆಯಲ್ಲಿ ಮಾತಾಡಿದ್ರೆ ಆಗ ಉತ್ತರ ಕೊಡ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

ನಾನು ಸ್ಪಷ್ಟವಾಗಿ ಹೇಳಿದ್ದೇನೆ. 123 ಸ್ಥಾನ ಕೊಟ್ಟು ಪಂಚರತ್ನ ಯೋಜನೆ ಜಾರಿ ಮಾಡದೇ ಹೋದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತಾ ಹೇಳಿದ್ದೆ. 123 ಬಂದಿಲ್ಲ ವಿಸರ್ಜನೆ ಮಾಡಿಲ್ಲ ಅಂತ ಅಲ್ಲಿ ಟೇಂಕಾರದ ಮಾತು ಆಡ್ತಾರೆ. ಇದೇ ಮನುಷ್ಯ 58 ಸ್ಥಾನ ನನ್ನಿಂದ ಬಂತು ಅಂತಾ ಹೇಳಿದ್ದರು. 1999ರಲ್ಲಿ ಇದೇ ಮನುಷ್ಯ ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 10 ಸ್ಥಾನಕ್ಕೆ ಬಂದಿದ್ವಿ. ಅವರೂ ಸೋತಿದ್ದರು. ಆದ್ರೆ ನಾನು ಒಬ್ಬ ಏಕಾಂಗಿಯಾಗಿ 40 ಸ್ಥಾನಕ್ಕೆ ರೀಚ್ ಆಗಿದ್ದೇನೆ. ಸಿದ್ದರಾಮಯ್ಯರಿಂದ ಪಕ್ಷ ಕಟ್ಟೋದು ಹೇಳಿಸಿಕೊಳ್ಳಬೇಕಾಗಿಲ್ಲ. ಇವರು ಹಲವು ಭಾಗ್ಯ ಕೊಟ್ಟು ಸಾಧನೆ ಮಾಡಿದ್ದಾರೆ ಅಲ್ಲವೇ? ತಾಕತ್ತಿದ್ದರೆ ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ? ಎಂದು ಗುಡುಗಿದ್ದಾರೆ.

ಬಿಜೆಪಿಯವರೇ ವಿರೋಧ ಪಕ್ಷ ನಾಯಕರಾಗಲಿ:
ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ವಿಪಕ್ಷ ಸ್ಥಾನ ಕೊಡಿ ಅಂತ ಕೇಳಲ್ಲ. ಬಿಜೆಪಿಯಲ್ಲಿ (BJP) ಅನೇಕ ನಾಯಕರು ಸಮರ್ಥರಿದ್ದಾರೆ. ಅವರಲ್ಲಿ ಒಬ್ಬರನ್ನ ವಿಪಕ್ಷ ನಾಯಕ ಮಾಡಿ ಅಂತ ಸಲಹೆ ಕೊಡ್ತೀನಿ. ಬಿಜೆಪಿ ನಾಯಕರೇ ವಿರೋಧ ಪಕ್ಷದ ನಾಯಕ ಆಗಲಿ. ಈ ಬಗ್ಗೆ ನಾನೇ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.

ಎನ್‌ಡಿಎ ಜೊತೆಗಿನ ಮೈತ್ರಿ ವಿಚಾರ ಮಾತನಾಡಿದ ಹೆಚ್‌ಡಿಕೆ, ಎನ್‌ಡಿಎ ಸಭೆಗೆ ಕರೆದರೆ ಹೋಗ್ತೀನಿ. ನಾನು ಕೇಂದ್ರದ ಸ್ಥಾನವನ್ನು ಕೇಳಿಲ್ಲ. ಕೇಂದ್ರ ಸಚಿವ ಸ್ಥಾನ, ವಿರೋಧ ಪಕ್ಷದ ಸ್ಥಾನ ನನಗೆ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡೋದಿಲ್ಲ. ಸೀಟಿನ ಬಗ್ಗೆ ಡಿಮ್ಯಾಂಡ್ ಆಗಿಲ್ಲ. ಸಭೆಗೆ ಕರೆದರೆ ಗೌರವ ಕೊಟ್ಟು ಹೋಗಿ ಚರ್ಚೆ ಮಾಡ್ತೀನಿ ಎಂದು ಹೇಳಿದ್ದಾರೆ.

ನನಗೆ ವಿಪಕ್ಷ ನಾಯಕನ ಆಸೆ ಇಲ್ಲ. ಜನರು ಕೊಟ್ಟ ಸ್ಥಾನದಲ್ಲಿ ಕೂರಲು ನಾನು ಸಿದ್ದ. ಕೇಂದ್ರದ ಬಿಜೆಪಿ ನಾಯಕರು ಕರೆದರೆ ಹೋಗಿ ಮಾತನಾಡುತ್ತೇನೆ. ಲೋಕಸಭೆಗೆ ಜೊತೆಗೆ ಹೋಗೋ ಬಗ್ಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡ್ತೀವಿ ಎಂದು ಮೈತ್ರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಅಲ್ಲದೇ ಎನ್‌ಡಿಎ ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ಹೋಗೋದಿಲ್ಲ ಎಂದು ತಿಳಿಸಿದ್ದಾರೆ.

Web Stories

Share This Article