ಗಂಡನಿಂದ ಮಾತ್ರವಲ್ಲ, ಡ್ರೈವರ್ ನಿಂದಲೂ ನಟಿ ರಾಖಿಗೆ ಮೋಸ : ಕಣ್ಣೀರಿಟ್ಟ ನಟಿ

Public TV
1 Min Read
rakhi sawant 2

ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಬೀದಿಯಲ್ಲಿ ಮತ್ತೆ ಕಣ್ಣೀರಿಟ್ಟಿದ್ದಾರೆ. ನನಗೆ ಪತಿಯಿಂದ ಮಾತ್ರವಲ್ಲ, ನನ್ನ ಕಾರು ಡ್ರೈವರ್ ನಿಂದಲೂ ಮೋಸವಾಗಿದೆ (Cheating). ಅವನ ವಿರುದ್ಧ ದೂರು  (Complaint)ನೀಡಲು ಆಟೋದಲ್ಲಿ ಹೊರಟಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಬೆಲೆಬಾಳುವ ಬಟ್ಟೆಗಳನ್ನು ಹಾಕಿಕೊಂಡು ಆಟೋದಲ್ಲಿ ರಾಖಿ ಹೊರಟಿದ್ದ ವಿಡಿಯೋ ವೈರಲ್ ಆಗಿವೆ.

Rakhi

ಈಗಾಗಲೇ ಪತಿ ಆದಿಲ್ (Adil) ತಮಗೆ ಮೋಸ ಮಾಡಿದ್ದಾರೆ ಎಂದು ರಾಖಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಹಲವು ತಿಂಗಳಿಂದ ಆದಿಲ್ ಮೈಸೂರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ನೋವಿನಿಂದ ರಾಖಿ ಆಚೆ ಬರುವ ಮುನ್ನವೇ ತಮ್ಮ ಕಾರು ಡ್ರೈವರ್ ನಿಂದಲೂ ತಮಗೆ ಮೋಸವಾಗಿದೆ ಎಂದು ಕ್ಯಾಮೆರಾ ಎದುರು ಹೇಳಿಕೊಂಡಿದ್ದಾರೆ. ಅಲ್ಲದೇ, ಕಣ್ಣೀರು ಕೂಡ ಹಾಕಿದ್ದಾರೆ. ಇದನ್ನೂ ಓದಿ:ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್

rakhi sawant

‘ನನ್ನ ಕಾರು ಡ್ರೈವರ್ (Car Driver) ಬಡವ ಎಂದು ಅವನನ್ನು ನೇಮಿಸಿಕೊಂಡೆ. ಅವನು ಕೂಡ ನನಗೆ ಮೋಸ ಮಾಡಿದ್ದಾರೆ. ಕಾರು ಚಾಲಕ ಓಡಿ ಹೋಗಿದ್ದಾನೆ. ಹಣ, ಕಾರು ಕೀ ಜೊತೆ ಅವರು ಪರಾರಿಯಾಗಿದ್ದಾನೆ. ಕಾರು ಚಾಲಕ ಉತ್ತರ ಪ್ರದೇಶದ ಪಪ್ಪು ಯಾದವ್ ಆಗಿದ್ದು, ಅವನ ವಿರುದ್ಧ ದೂರು ನೀಡಲು ಓಶಿವಾರ ಪೊಲೀಸ್ ಠಾಣೆಗೆ ದೂರು ಕೊಡಲು ಆಟೋದಲ್ಲಿ ಹೋಗುತ್ತಿದ್ದೇನೆ’ ಎಂದಿದ್ದಾರೆ ರಾಖಿ.

 

ತಮಗೆ ಈ ಜಗತ್ತಿನಲ್ಲಿ ಬದುಕಬೇಕೋ ಅಥವಾ ಬೇರೆ ಗ್ರಹದಲ್ಲಿ ವಾಸವಾಗಬೇಕೊ ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿ ಬಂದವರೆಲ್ಲ ನನಗೆ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ದುಃಖಿಸಿದ್ದಾರೆ. ಈ ನಡೆಯಿಂದ ತಮಗೆ ಸಾಕಷ್ಟು ಬೇಸರವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಬರೆದುಕೊಂಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article