ಕನ್ನಡದಲ್ಲಿ ‘ಜವಾನ್’ ಸಿನಿಮಾ ಯಾಕಿಲ್ಲ? : ಶಾರುಖ್ ಖಾನ್ ಗೆ ನೆಟ್ಟಿಗರ ತೀವ್ರ ತರಾಟೆ

Public TV
3 Min Read
jawan 3

ತೀ ನಿರೀಕ್ಷೆ ಮೂಡಿಸಿರುವ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದೆ. ಮೊನ್ನೆಯಷ್ಟೇ ಮೂರು ಭಾಷೆಗಳ ಪೋಸ್ಟರ್ ಅನ್ನು ಶಾರುಖ್ ಖಾನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಜವಾನ್ ಬರುತ್ತಿದ್ದರೆ ಕನ್ನಡದಲ್ಲಿ (Kannada) ಏಕಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಕನ್ನಡದಲ್ಲಿ ಜವಾನ್ ಬಂದರೆ ಮಾತ್ರ ನೋಡುತ್ತೇವೆ ಎಂದು ಹಲವರು ಶಾರುಖ್ ಗೆ ಪ್ರಶ್ನೆ ಕೂಡ ಮಾಡಿದ್ದಾರೆ.

Jawan

ಮೊನ್ನೆಯಷ್ಟೇ ಜವಾನ್ (Jawan) ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಪೋಸ್ಟರ್(Poster) ಗೆ ಫಿದಾ ಆಗಿದ್ದಾರೆ. ಬೋಳು ತಲೆಯ ಶಾರುಖ್ ಖಾನ್ (Shah Rukh Khan)  ಕೈಯಲ್ಲಿ ಗನ್ ಹಿಡಿದುಕೊಂಡು ಪೋಸ್ ನೀಡಿರುವ ಪೋಸ್ಟರ್, ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲೇ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿದೆ. ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಿರ್ದೇಶಕರು.

Jawan 1

ಬಹುನಿರೀಕ್ಷಿತ ಚಿತ್ರವಾದ ‘ಜವಾನ್’ ಸಿನಿಮಾದ ಪ್ರಿವ್ಯೂ ಮೊನ್ನೆ ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಾಗುತ್ತಿರುವ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕಥೆಯಾಗಿದೆ.

jawan 2

‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಬಹಳ ಕುತೂಹಲವಿತ್ತು. ಇಂದು ಬಿಡುಗಡೆಯಾದ ಟೀಸರ್, ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ತಲುಪಿಸಿದೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಚಿತ್ರವು ಆಕ್ಷನ್ ಮತ್ತು ಎಮೋಷನ್ ಗಳನ್ನು ಹದವಾಗಿ ಹಿಡಿದಿಟ್ಟಿದೆ. ಚಿತ್ರದ ಕೆಲವು ಅದ್ಭುತ ಕ್ಷಣಗಳನ್ನು ಹಿಡಿದಿಡುವುದರ ಜೊತೆಗೆ, ‘ಜವಾನ್ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

Jawan 2

‘ಕಿಂಗ್ ಖಾನ್’ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಈ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ. ಈ ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು. ಶಾರುಖ್ ಖಾನ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರ ತುಣುಕುಗಳು ಸಹ ಈ ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ದೂರಿ ಹಾಡುಗಳು, ‘ಬೇಕರಾರ್ ಕರಕೇ ಹಮೇ’ ಹಾಡಿಗೆ ಶಾರುಖ್ ಖಾನ್ ಅಭಿನಯ … ಇವೆಲ್ಲವೂ ಈ ಪ್ರಿವ್ಯೂ ಚಿತ್ರದ ಹೈಲೈಟ್ ಗಳಾಗಿದ್ದು, ಚಿತ್ರ ಬಿಡುಗಡೆಗೆ ಕಾಯುವಂತಾಗಿದೆ.

Jawan 4

ದಕ್ಷಿಣ ಭಾರತದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರಾದ ಅಟ್ಲಿ (Atlee) ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಪ್ರಿವ್ಯೂನ ಇನ್ನೊಂದು ಹೈಲೈಟ್. ಈ ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ ರಾಪ್’ ಎಂಬ ಹಾಡು.

Jawan 3

‘ಜವಾನ್’, ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಶಾರುಖ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ವಿವಿಧ ಭಾಷೆಯ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ, ವಿಜಯ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ನಟಿಸಿರುವ ಈ ಚಿತ್ರವು ಎಲ್ಲ ಭಾಷೆಗಳ ಜನರಿಗೂ ತಲುಪವಂತೆ ಚಿತ್ರಿಸಲಾಗಿದೆ.

 

ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಜನರ ಗಮನ ಸೆಳೆದ ಟೀಸರ್, ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ನಡಿ ಗೌರಿ ಖಾನ್ ನಿರ್ಮಾಣ ಮಾಡಿದರೆ, ಗೌರವ್ ವರ್ಮ ಸಹ-ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

Web Stories

Share This Article