ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರ ಐಶ್ಯರ್ಯಾ (Aishwarya Rajinikanth) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಾಲ್ ಸಲಾಂ’ ಸಿನಿಮಾದ ಬಹುತೇಕ ಶೂಟಿಂಗ್ (Shooting) ಮುಗಿದಿದೆ. ಕೊನೆಯ ದಿನದ ಚಿತ್ರೀಕರಣ ಮುಗಿಸಿದ ಐಶ್ವರ್ಯಾ ತಮ್ಮ ತಂಡದ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದ್ದು, ಈ ಚಿತ್ರದಲ್ಲಿ ರಜನಿಕಾಂತ್ (Rajinikanth) ಕೂಡ ಪಾತ್ರ ಮಾಡಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ (Lal Salam) ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀದಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ
ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜಿನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆದಿತ್ತು.
1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]