ಮಂಡ್ಯ: ಜಿಲ್ಲೆಯ ನಾಗಮಂಗಲದ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಆತ್ಮಹತ್ಯೆ ಯತ್ನ ಪ್ರಕರಣವಾದ ಬಳಿಕ ನಾಗಮಂಗಲದಲ್ಲಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ದ್ವೇಷದ ರಾಜಕೀಯ ಮಾಡುತ್ತಾ ಇದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಇದೀಗ ಮತ್ತೊಂದು ಆಡಿಯೋವನ್ನು (Audio) ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.
ನಾಗಮಂಗಲ ತಾಲೂಕಿನ ರೈತ ಕೃಷ್ಣೇಗೌಡ ಎಂಬಾತ ಕೆಇಬಿ ಸಿಬ್ಬಂದಿ ಜೊತೆ ಮಾತಾನಾಡುವ ವೇಳೆ ನಡೆದ ಸಂವಾದವನ್ನು ಜೆಡಿಎಸ್ ವೈರಲ್ ಮಾಡುತ್ತಾ ಇದೆ. ಈ ಆಡಿಯೋದಲ್ಲಿ ರೈತ ಕೆಇಬಿ ಸಿಬ್ಬಂದಿಗೆ ಯಾಕೆ ಸಮ್ಮನೆ ವಿದ್ಯುತ್ ಅನ್ನು ತೆಗೆಯುತ್ತಾ ಇದ್ದೀರಾ? ಮಳೆನೂ ಇಲ್ಲ ಗಾಳಿನೂ ಇಲ್ಲ. ಜಿಟಿಜಿಟಿ ಮಳೆಯ ಹಾಗೆ 5 ನಿಮಿಷ ಬರುತ್ತೆ ಅಷ್ಟೇ. ಇಷ್ಟಕ್ಕೆ ವಿದ್ಯುತ್ ತೆಗೆದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕೆಇಬಿ ಸಿಬ್ಬಂದಿ ಲೈನ್ ಟ್ರಿಪ್ ಆಗುತ್ತಾ ಇದೆ. ನಾವೇನ್ ಮಾಡೋದು? ಲೈನ್ ಮ್ಯಾನ್ ಚೆಕ್ ಮಾಡ್ತಾ ಇದ್ದಾನೆ ಎಂದು ಹೇಳಿದ್ದಾರೆ. ರೈತ ಕೃಷ್ಣೇಗೌಡ ಹೀಗೆ ಆದ್ರೆ ಮಕ್ಕಳು ಓದಿಕೊಳ್ಳೋದು ಹೇಗೆ ಎಂದು ಹೇಳಿದ್ದಾರೆ. ಕೆಇಬಿ ಸಿಬ್ಬಂದಿ ಮುಂದುವರಿದು ನಾವೇನ್ ಮಾಡೋದು ಹೇಳಿ ಒಬ್ಬ ಲೈನ್ ಮ್ಯಾನ್ ರಜಾ ಹಾಕಿದ್ದಾನೆ. ಭೀಮನಹಳ್ಳಿ ಲೈನ್ ಮ್ಯಾನ್ ಹುಡುಗನನ್ನು ಜೆಡಿಎಸ್ ಪರ ಓಡಾಡಿದ್ದಾನೆ ಎಂದು ಟ್ರಾನ್ಫ್ಫರ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RTPS ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಇದಕ್ಕೆ ರೈತ ಏನು ಜೆಡಿಎಸ್‌ಗೆ ಮಾಡಿದಾರೆ ಎಂದು ಹೀಗೆ ಮಾಡಿದ್ರೆ ಹೇಗೆ? ಜೆಡಿಎಸ್ ಆಗಲಿ, ಕಾಂಗ್ರೆಸ್ ಆಗಲಿ ಹೀಗೆ ಮಾಡಿದರೆ ಹೇಗೆ ಎಂದು ಇಬ್ಬರ ನಡುವೆ ಸಂವಾದ ನಡೆದಿದೆ. ಇದೀಗ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: KRS ಒಳಹರಿವಿನ ಪ್ರಮಾಣ ಕುಸಿತ
Web Stories