ನಿಮ್ಮ ರೂಮ್‍ನಲ್ಲಿ ಡ್ರಗ್ಸ್ ಇದೆ – ಪೊಲೀಸರಂತೆ ನುಗ್ಗಿ ಯುವಕರ ರೂಮ್ ದರೋಡೆ!

Public TV
1 Min Read
POLICE 2

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಯುವಕರ ರೂಮ್‍ಗೆ ನುಗ್ಗಿ ದರೋಡೆ ಮಾಡಿದ ಪ್ರಕರಣ ನಗರದ ರಾಮಚಂದ್ರಪುರದಲ್ಲಿ (Ramachandrapura) ನಡೆದಿದೆ.

ಮುಂಜಾನೆ ಮನೆಯ ಬಾಗಿಲು ತಟ್ಟಿದ್ದ ದರೋಡೆಕೋರರು. ನಿಮ್ಮ ರೂಮ್‍ನಲ್ಲಿ ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿ ಬಂದಿದೆ. ಪರಿಶೀಲನೆ ಮಾಡಬೇಕು ಎಂದು ಪೊಲೀಸರಂತೆ ಹೇಳಿಕೊಂಡಿದ್ದಾರೆ. ಬಳಿಕ ಮನೆಯನ್ನೆಲ್ಲಾ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಆಷಾಢ ಮಾಸದ ಕೊನೆ ಶುಕ್ರವಾರ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ

ಆದರೆ ದರೋಡೆಕೋರರಿಗೆ ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗಲಿಲ್ಲ. ಬಳಿಕ ಚಾಕು ತೋರಿಸಿ ಬೆದರಿಸಿ ಆನ್‍ಲೈನ್ ಮೂಲಕ 13,000 ರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಯುವಕರ ಬಳಿ ಇದ್ದ ಉಂಗುರ ಹಾಗೂ ಕಿವಿಯ ರಿಂಗ್ ಕಸಿದುಕೊಂಡಿದ್ದಾರೆ.

ನಾಲ್ವರು ಯುವಕರು ರೂಮ್‍ನಲ್ಲಿ ವಾಸವಾಗಿದ್ದು, 3 ಜನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೋರ್ವ ವಿದ್ಯಾರ್ಥಿಯಾಗಿದ್ದಾನೆ. ಯುವಕರು ವಿದ್ಯಾರಣ್ಯಪುರಂ (Vidyaranyapura) ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌

Web Stories

Share This Article