ಬೆಂಗಳೂರು: ಈ ಸರ್ಕಾರ ಬಂದ ಮೇಲೂ ಸಾಬ್ರಿಗೆ (Muslim) ರಕ್ಷಣೆ ಇಲ್ಲ ಎಂದು ವಿಧಾನಸಭೆಯಲ್ಲಿ ಜೆಡಿಎಸ್ (JDS) ಶಾಸಕ ಹೆಚ್‌ಡಿ ರೇವಣ್ಣ (HD Revanna) ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೇವಣ್ಣ, ಹಾಸನ ಆರ್ಟ್ಸ್ ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ ಎಂದು ಹೇಳಿದರು.
ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಸಾಬ್ರು ಇಷ್ಟೆಲ್ಲ ನಿಮಗೆ ಓಟ್ ಹಾಕಿದ್ದಾರೆ. ಅದನ್ನು ಸರಿಪಡಿಸಿ ಎಂದು ರೇವಣ್ಣ ಆಗ್ರಹಿಸಿದರು. ಪಾಪ ನಮ್ ಸ್ಪೀಕರ್ ಖಾದರ್ ಸಾಹೇಬ್ರು ಏನಾದ್ರೂ ಮಾಡ್ತಿದ್ದರೇನೋ, ಸಚಿವರಿಗೆ ಸೂಚನೆ ನೀಡಬೇಕು ಎಂದು ರೇವಣ್ಣ ಮನವಿ ಮಾಡಿದರು. ಇದನ್ನೂ ಓದಿ: ಟ್ರೋಲ್‍ಗೆ ಕೇರ್ ಮಾಡ್ಬೇಡಿ- ವಿಧಾನಸಭೆಯಲ್ಲಿ ಸ್ಪೀಕರ್ ಕಿವಿಮಾತು
ರೇವಣ್ಣ ಮಾತನಾಡುವ ವೇಳೆ ಸ್ಪೀಕರ್ ಪೀಠದಲ್ಲಿ ಉಪಸಭಾಧ್ಯಕ್ಷ ರಾಮಪ್ಪ ಲಮಾಣಿ ಆಸೀನರಾಗಿದ್ದರು. ಸ್ಪೀಕರ್ ಖಾದರ್ ಪೀಠದಲ್ಲಿ ಇರಲಿಲ್ಲ. ಇದನ್ನೂ ಓದಿ: ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ? – ಸದನದಲ್ಲಿ ಸ್ವಾರಸ್ಯಕರ ಚರ್ಚೆ
Web Stories