ಕೇರಳ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣ – ಐವರು ಪಿಎಫ್‌ಐ ಕಾರ್ಯಕರ್ತರು ದೋಷಿಗಳು

Public TV
1 Min Read
Kerala Professor T J Joseph hand chopping case 6 found guilty 5 acquitted

ತಿರುವನಂತಪುರಂ: ಕೇರಳದ ಪ್ರೊಫೆಸರ್‌ ಅವರ ಕೈಯನ್ನು ಕತ್ತರಿಸಿದ ಪ್ರಕರಣಕ್ಕೆ (Kerala Professor’s Hand-Chopping Case) ಸಂಬಂಧಿಸಿದಂತೆ ಐವರ ವಿರುದ್ಧದ ಆರೋಪ ಸಾಬೀತಾಗಿದೆ.

ಕೊಚ್ಚಿಯಲ್ಲಿರುವ ರಾಷ್ಟ್ರೀಯ ತನಿಖಾ ದಳ (NIA) ಕೋರ್ಟ್‌ ಐವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಉಳಿದ ಐವರು ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟ ಕೋರ್ಟ್‌ ಮುಂದೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿತು.

ಈ ಮೊದಲು ಮೊದಲ ಹಂತದ ವಿಚಾರಣೆ ನಡೆಸಿದಾಗ 13 ಮಂದಿ ಮೇಲಿದ್ದ ಆರೋಪ ಸಾಬೀತಾಗಿತ್ತು. 18 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿತು. ತೀರ್ಪಿನ ನಂತರ 11 ಮಂದಿಯ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಆರೋಪಿಗಳೆಲ್ಲರೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (PFI) ಸದಸ್ಯರಾಗಿದ್ದರು.

ಈ ಕೃತ್ಯದ ಪ್ರಧಾನ ಸೂತ್ರಧಾರ ಸವಾದ್‌ ಈಗಲೂ ತಲೆಮರೆಸಿಕೊಂಡಿದ್ದಾನೆ. ಕೋವಿಡ್‌ ಹಿನ್ನೆಲೆಯಲ್ಲಿ ತಡವಾಗಿ ಕೋರ್ಟ್‌ ವಿಚಾರಣೆ ಆರಂಭಗೊಂಡಿತ್ತು.  ಇದನ್ನೂ ಓದಿ: ಡಬಲ್‌ ಮರ್ಡರ್‌ ಬಳಿಕ ಪಬ್ಲಿಕ್‌ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?

pfi flag india

ಏನಿದು ಪ್ರಕರಣ?
ಕಾಲೇಜಿನಲ್ಲಿ ನಡೆದ ಆಂತರಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2010ರ ಜುಲೈ 4 ರಂದು ತೊಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್‌ ಟಿಜೆ ಜೋಸೆಫ್‌ ( T J Joseph ) ಅವರ ಮೇಲೆ ದಾಳಿ ನಡೆದಿತ್ತು. ಶಸ್ತ್ರ ಸಜ್ಜಿತರಾಗಿಯೇ ಆಯುಧ ಮತ್ತು ಸ್ಫೋಟಕ ಸಾಮಗ್ರಿಗಳೊಂದಿಗೆ ಕಾರಿನಲ್ಲಿ ಬಂದಿದ್ದ ಪಿಎಫ್‌ಐ ಕಾರ್ಯಕರ್ತರು ಜೋಸೆಫ್‌ ಅವರ ಕಾರನ್ನು ತಡೆದು ನಿಲ್ಲಿಸಿದ್ದರು. ಬಳಿಕ ಕಾರಿನಿಂದ ಜೋಸೆಫ್‌ ಅವರನ್ನು ಹೊರಗಡೆ ಎಳೆದು ಕೊಡಲಿಯಿಂದ ಬಲಗೈಯನ್ನು ಕತ್ತರಿಸಿ ಹತ್ಯೆಗೆ ಯತ್ನಿಸಿ ಎಡಗೈಯನ್ನು ಕತ್ತರಿಸಿದ್ದರು.

ಈ ಸಂದರ್ಭದಲ್ಲಿ ಜೋಸೆಫ್‌ ಅವರ ಸಹೋದರಿ ಕೃತ್ಯವನ್ನು ತಡೆಯಲು ಮುಂದಾದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದರು.

 

Web Stories

Share This Article