ನೀವು ಅಂದುಕೊಂಡಂತೆ ಅಜಿತ್ ಒಳ್ಳೆಯ ಮನುಷ್ಯನಲ್ಲ- ನಟನ ವಿರುದ್ಧ ನಿರ್ಮಾಪಕ ಕಿಡಿ

Public TV
2 Min Read
ajith kumar

ನ್ನಡ ಸಿನಿಮಾರಂಗದ ಖ್ಯಾತ ನಟ ಕಿಚ್ಚ ಸುದೀಪ್ (Kiccha Sudeep) ಮೇಲೆ ನಿರ್ಮಾಪಕ ಎಂ.ಎನ್ ಕುಮಾರ್ ಅವರು ಆರೋಪ ಮಾಡಿದ್ದರು. ಸುದೀಪ್ ಅಡ್ವಾನ್ಸ್ ಪಡೆದು ಕಾಲ್‌ಶೀಟ್ ನೀಡಿಲ್ಲ ಅಂತಾ ಕಿಡಿಕಾರಿದ್ದರು. ಈ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಕಾಲಿವುಡ್‌ನಲ್ಲಿ ತಮಿಳು (Tamil Films) ನಟ ಅಜಿತ್ ಕುಮಾರ್ (Ajith Kumar) ಮೇಲೆ ನಿರ್ಮಾಪಕರೊಬ್ಬರು ರೊಚ್ಚಿಗೆದ್ದಿದ್ದಾರೆ. ತಮ್ಮಿಂದ ಹಣ ಪಡೆದು, ಸಿನಿಮಾ ಮಾಡದೇ ಆಟ ಆಡಿಸುತ್ತಿದ್ದಾರೆ ಎಂದು ನಿರ್ಮಾಪಕ ಮಾಣಿಕಂ ನಾರಾಯಣನ್ ಆರೋಪ ಮಾಡಿದ್ದಾರೆ.

ajith kumar 1

ತಮಿಳಿನ ಸ್ಟಾರ್ ನಟರ ಅನೇಕ ಸಿನಿಮಾಗಳಿಗೆ ಮಾಣಿಕಂ ನಾರಾಯಣನ್ ಅವರು ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಜಿತ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟ ಅಜಿತ್ ಅವರು ಬಹಳ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಮಲೇಷಿಯಾಗೆ ಕಳಿಸಲು ನನ್ನಿಂದ ಹಣ ಪಡೆದಿದ್ದರು. ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡೋಣ ಅಂತಾ ಭರವಸೆ ನೀಡಿದ್ದರು. ಈ ಹಣವನ್ನು ಸಂಭಾವನೆಗೆ ಸರಿ ಮಾಡಿಕೊಳ್ಳೋಣ ಅಂತ ಅವರು ಹೇಳಿದ್ದರು. ಇಂದಿನ ತನಕ ಅವರು ನನ್ನ ಜೊತೆ ಸಿನಿಮಾ ಮಾಡುವ ಮನಸ್ಸು ಮಾಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ ಎಂದು ಮಾಣಿಕಂ ನಾರಾಯಣನ್ ಅವರು ಮಾತನಾಡಿದ್ದಾರೆ. ಈ ಸಂಗತಿ ಈಗ ಕಾಲಿವುಡ್ (Kollywood) ರಂಗದಲ್ಲಿ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

455509 ajith kumar

ಈ ಬಗ್ಗೆ ಅಜಿತ್ ಅವರು ಇಷ್ಟು ವರ್ಷಗಳ ತನಕ ಮಾತನಾಡಿಲ್ಲ. ತನ್ನನ್ನು ತಾನು ಒಳ್ಳೆಯವನು ಅಂತ ಅವರು ಹೇಳಿಕೊಳ್ಳುತ್ತಾರೆ. ಆದರೆ ಅವರು ಒಳ್ಳೆಯ ಮನುಷ್ಯ ಅಲ್ಲ. ಅವರದ್ದು ಒಳ್ಳೆಯ ಕುಟುಂಬ. ವರ್ಷಕ್ಕೆ ಅವರು 50 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಹೀಗಿರುವಾಗ ಅವರು ಜನರಿಗೆ ಯಾಕೆ ಮೋಸ ಮಾಡಬೇಕು ಅವರ ಜೊತೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಿದ್ದರೂ ಕೂಡ ಅವರು ನಿರ್ಮಾಪಕರಿಗೆ ಸಹಾಯ ಮಾಡಿಲ್ಲ ಎಂದು ಮಾಣಿಕಂ ನಾರಾಯಣನ್ ಅಜಿತ್ ವಿರುದ್ಧ ಮಾತನಾಡಿರೋದು ಸಂಚಲನ ಮೂಡಿಸುತ್ತಿದೆ.

ತಮಿಳು ಸಿನಿಮಾರಂಗ ಹಿರಿಯ ನಿರ್ಮಾಪಕ ಮಾಣಿಕಂ ನಾರಾಯಣನ್ (Manickam Narayanan) ಸಂದರ್ಶನದ ಮಾತುಗಳು ಈಗ ಸಖತ್ ವೈರಲ್ ಆಗುತ್ತಿದೆ. ನಿರ್ಮಾಪಕನ ಆರೋಪಕ್ಕೆ ನಟ ಅಜಿತ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿಯವರೆಗೂ ಕಾದುನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article