3 ನಿಮಿಷ ನಟಿಸಿದ್ದಕ್ಕೆ 3 ಕೋಟಿ ಸಂಭಾವನೆ ಪಡೆದ ‘ಐರಾವತ’ ನಟಿ

Public TV
2 Min Read
URVASHI RAUTELA 4

ನ್ನಡದ ‘ಐರಾವತ’ (Airavatha Film) ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಸಾಲು ಸಾಲು ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂಭಾವನೆ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ತೆಲುಗಿನ ಸಿನಿಮಾದಲ್ಲಿ ಕೇವಲ 3 ನಿಮಿಷ ನಟಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆದಿದ್ದಾರೆ. ಅದ್ಯಾವ ಸಿನಿಮಾ? ಏನ್ ಕಥೆ ಇಲ್ಲಿದೆ ಡಿಟೈಲ್ಸ್..ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು

Urvashi Rautela 3

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಬೋಯಪತಿ ಶ್ರೀನು- ರಾಮ್ ಪೋತಿನೇನಿ (Ram Potineni) ನಟನೆಯ ಸಿನಿಮಾದಲ್ಲಿ ಮಾದಕ ಬೆಡಗಿ ಊರ್ವಶಿ ರೌಟೇಲಾ ನಟಿಸಿದ್ದಾರೆ. ಕೇವಲ 3 ನಿಮಿಷದ ನಟನೆಗೆ 3 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಅಂದರೆ, ಇದರರ್ಥ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

urvashi rautela 2

ಈ ಚಿತ್ರಕ್ಕೆ ಮೂರೇ ನಿಮಿಷಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಾ ಇರೋದು ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ‘ವಾಲ್ತೇರ್ ವೀರಯ್ಯ’ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಸಾಂಗ್ ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಹಾಡಿಗೆ ಹೆಜ್ಜೆ ಹಾಕಲು ನಟಿ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಈಗ ರಾಮ್ ಪೋತಿನೇನಿ ಸಿನಿಮಾದ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ.

ಊರ್ವಶಿ ರೌಟೇಲಾ ಅವರು ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರಕ್ಕೂ ದುಬಾರಿ ಸಂಭಾವನೆಯನ್ನೇ ನಟಿ ಡಿಮ್ಯಾಂಡ್ ಮಾಡಿದ್ದಾರೆ. ಒಟ್ನಲ್ಲಿ ನಾಯಕಿಯಾಗಿ ಬೇಡಿಕೆ ಇರೋದಕ್ಕಿಂತ ಐಟಂ ಹಾಡಿಗೆ ಹೆಜ್ಜೆ ಹಾಕಲು ಐರಾವತ ಸುಂದರಿಗೆ ಬೇಡಿಕೆ ಜಾಸ್ತಿಯಾಗಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article