ಲಕ್ನೋ: ಮದ್ಯಪಾನ ಆರೋಗ್ಯಕ್ಕೆ (Alcohol) ಹಾನಿಕಾರಕ ಎಂದು ಗೊತ್ತಿದ್ದರೂ ಕುಡಿತದ ಚಟಕ್ಕೆ ದಾಸರಾದವರು ಅದರಿಂದ ಹೊರಬರಲು ಕಷ್ಟ ಸಾಧ್ಯ. ಅಂತೆಯೇ ಇಲ್ಲೊಂದು ಜೋಡಿ ವ್ಯಕ್ತಿಯನ್ನು ಕುಡಿತದ ಚಟದಿಂದ ದೂರ ಮಾಡಲು ಹೋಗಿ ತಾವೇ ಪ್ರಾಣಬಿಟ್ಟಿದ್ದಾರೆ.
ಈ ಘಟನೆ ಉತ್ತಪ್ರದೇಶದ ಕಾನ್ಪುರದ ದೆಹತ್ ಜಿಲ್ಲೆಯ ಚಿರಖಿರಿ ಗ್ರಾಮದಲ್ಲಿ ನಡೆದಿದೆ. ವಿಪರೀತ ಮದ್ಯವ್ಯಸನ ಮಾಡುತ್ತಿದ್ದ ಸಹೋದರನನ್ನು ಹೇಗಾದರೂ ಮಾಡಿ ಇದರಿಂದ ಹೊರಬರುವಂತೆ ಮಾಡಬೇಕು ಅಂತಾ ಪತಿ ಹಾಗೂ ಪತ್ನಿ ಪ್ರಯತ್ನಿಸಿ ವಿಫಲರಾಗಿದ್ದಲ್ಲದೇ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
#Kanpurdehatpolice हत्यारोपी की गिरफ्तारी के सम्बन्ध में पुलिस अधीक्षक द्वारा दी गयी बाइट pic.twitter.com/9HOXA6oJKR
— Kanpur Dehat Police (@kanpurdehatpol) July 9, 2023
ಸಹೋದರ ಹಾಗೂ ಆತನ ಪತ್ನಿ ಸೇರಿ ತನ್ನನ್ನು ಮದ್ಯಪಾನದಿಂದ ದೂರ ಮಾಡಲು ಯತ್ನಿಸುತ್ತಿದ್ದಾರೆ ಎಂಬುದನ್ನು ಮನಗಂಡ ಆರೋಪಿ, ವಿಪರೀತ ಮದ್ಯಪಾನ ಮಾಡಿಕೊಂಡು ಬಂದು ದಂಪತಿಯನ್ನು ಥಳಿಸಿ ಕೊಂದೇ ಬಿಟ್ಟಿದ್ದಾನೆ. ಸದ್ಯ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಮಂಗಳ್ಪುರ್ ಪೊಲೀಸ್ ಠಾಣೆಯ (Mangalpur police Station) ಅಧಿಕಾರಿ ಪ್ರತಿಕ್ರಿಯಿಸಿ, ಮಂಗಳ್ಪುರ್ ಪೊಲೀಸ್ ಠಾಣೆಯ ಚಿರಖಿರಿ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದೆ. ಕೂಡಲೇ ಮಂಗಳ್ಪುರ್ ಪೊಲೀಸ್ ಠಾಣೆಯ ಪೊಲೀಸರ ತಂಡ ಮತ್ತು ಎಸ್‍ಒಜಿ ತಂಡ ಜಂಟಿಯಾಗಿ ಕ್ರಮ ಕೈಗೊಂಡು ಆರೋಪಿ ಮೋಹನ್ ಲಾಲ್ ನನ್ನು ಘಟನೆ ನಡೆದು 6 ಗಂಟೆಗಳ ಒಳಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]