‌ವಿಧಾನಸೌಧದಲ್ಲಿ ನಮ್ಗೆ ಕಾರ್‌ ಪಾರ್ಕಿಂಗ್‌ ಮಾಡೋಕೆ ಸ್ಥಳ ಸಿಕ್ತಿಲ್ಲ – ಪರಿಷತ್ ನಲ್ಲಿ ಶಾಸಕರ ಅಳಲು

Public TV
2 Min Read
Vidhana Soudha

– ದಲ್ಲಾಳಿಗಳಿಂದ ರಾಜಕಾರಣಿಗಳ ಪಾಸ್ ದುರ್ಬಳಕೆ- ಹೆಚ್‌.ಕೆ ಪಾಟೀಲ್‌ ಆರೋಪ
– ಮಾಫಿಯಾ ದಂಧೆ ಮಾಡೋಕೆ ದಲ್ಲಾಳಿಗಳು ಬರ್ತಿದ್ದಾರಾ – ಮುನಿರಾಜು ಗೌಡ ಪ್ರಶ್ನೆ

ಬೆಂಗಳೂರು: ವಿಧಾನ ಪರಿಷತ್ (Vidhan Parishad) ಸದಸ್ಯರಿಗೆ ವಿಧಾನಸೌಧದಲ್ಲಿ ವಾಹನಗಳ ಪಾರ್ಕಿಂಗ್‌ಗೆ (Vidhana Soudha Parking) ಸಮಸ್ಯೆ ಆಗುತ್ತಿರುವ ಬಗ್ಗೆ ಕಲಾಪದಲ್ಲಿ ಚರ್ಚಿಸಲಾಯಿತು. ಪ್ರಶ್ನೋತ್ತರ, ಶೂನ್ಯವೇಳೆ ಅವಧಿ ಮುಗಿದ ಕೂಡಲೇ ಬಿಜೆಪಿಯ ಡಿ.ಎಸ್ ಅರುಣ್ ವಿಷಯ ಪ್ರಸ್ತಾಪ ಮಾಡಿದರು.

ನಮಗೆ ವಿಧಾನಸೌಧ (Vidhana Soudha) ಮತ್ತು ಶಾಸಕರ ಭವನದಲ್ಲಿ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಕಾರ್ ಪಾರ್ಕಿಂಗ್ ಮಾಡಲು ಆಗ್ತಿಲ್ಲ. ವಿಧಾನಸೌಧದಲ್ಲಿ ಯಾರ್ಯಾರೋ ಎಲ್ಲೆಲ್ಲೋ ಕಾರು ನಿಲ್ಲಿಸುತ್ತಾರೆ. ಇದರಿಂದ‌ ನಮಗೆ ಸಮಸ್ಯೆ ಆಗ್ತಿದೆ. ಪಾಸ್ ಇಲ್ಲದೇ ಇರೋರ ಕಾರ್ ಕೂಡಾ ಪಾರ್ಕಿಂಗ್ ಆಗ್ತಿದೆ. ಇದರಿಂದ ಶಾಸಕರಾದ ನಮಗೆ ಸಮಸ್ಯೆ ಆಗ್ತಿದೆ ಅಂತಾ ಸಭಾಪತಿಗಳ ಗಮನಕ್ಕೆ ತಂದರು.

Basavaraj Horatti

ಕೂಡಲೇ ಸಭಾ ನಾಯಕರು ಇದನ್ನ ಸರಿ ಮಾಡುವಂತೆ ಸಭಾಪತಿ ಹೊರಟ್ಟಿ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಭಾ ನಾಯಕರ, ಬೋಸರಾಜು, ಸರಿಪಡಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಸಾಧ್ಯವಿಲ್ಲ – ದಿನೇಶ್ ಗುಂಡೂರಾವ್

ಬಳಿಕ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ (HK Patil), ಪಾರ್ಕಿಂಗ್ ಸಮಸ್ಯೆ ಇರೋದು ನಿಜ. ಇಲ್ಲಿರೋ ಹೊಟೇಲ್ ನಲ್ಲಿ ಹೋಗಿ ಬರೋದಕ್ಕೂ ಸಮಸ್ಯೆ ಆಗಿದೆ. ಹೀಗಾಗಿ ಸಭಾಪತಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮಾಡಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದರು.

Session 2

ಈ ವೇಳೆ ಜೆಡಿಎಸ್‌ನ ಶರವಣ, ‌ಕಾರ್ ಪಾರ್ಕಿಂಗ್ ಗೆ QR ಕೋಡ್ ಜಾರಿ ಮಾಡಿ ಅಂತಾ ಒತ್ತಾಯಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ‌ ಸಚಿವ ಹೆಚ್.ಕೆ ಪಾಟೀಲ್, ವಿಧಾನಸೌಧದಲ್ಲಿ ರಾಜಕಾರಣಿಗಳ ಪಾಸ್ ಅನ್ನ ಬಳಕೆ ಮಾಡೋ ದಲ್ಲಾಳಿಗಳು ಇದ್ದಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಮಾಡಬೇಕು. ಇದಕ್ಕೆ ಕ್ರಮ‌ ತೆಗೆದುಕೊಳ್ಳೋಣ ಎಂದರು.

ನಂತರ ಬಿಜೆಪಿ ಸದಸ್ಯ ತುಳಿಸಿ ಮುನಿರಾಜು ಗೌಡ, ದಲ್ಲಾಳಿಗಳು ಅಂದ್ರೆ ಯಾಕೆ ಬರ್ತಿದ್ದಾರೆ. ವರ್ಗಾವಣೆ ದಂಧೆ ಮಾಡೋಕೋ, ಭೂ ಮಾಫಿಯಾ ದಂಧೆ ಮಾಡೋಕೆ ಬರ್ತಿದ್ದಾರೆ ಅಂತಾ ಹೇಳಿ. ಯಾರು ದಲ್ಲಾಳಿಗಳು ಹೇಳಬೇಕು ಎಂದು ಒತ್ತಾಯಿಸಿದ್ರು. ಇದನ್ನೂ ಓದಿ: ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ

ಇದಕ್ಕೆ ‌ಆಕ್ರೋಶಗೊಂಡ ಹೆಚ್‌.ಕೆ ಪಾಟೀಲ್, ‌ಪಟ್ಟಿ ಕೊಡಿ ಅಂದ್ರೆ ಕೊಡ್ತೀನಿ. ಹೆಸರು ಹೇಳು ಅಂದರು ಹೇಳುತ್ತೇನೆ. ಎಲ್ಲಾ ಕೆಲಸದಲ್ಲೂ ದಳ್ಳಾಳಿಗಳು ಇರ್ತಾರೆ. ಇದನ್ನ ಸರಿ ಮಾಡೋದಕ್ಕೆ ನಾವು ಕ್ರಮ ತೆಗೆದುಕೊಳ್ಳೋಣ. ಕೊನೆದಾಗಿ ಸಭೆ ‌ಮಾಡಿ ಸಮಸ್ಯೆ ಪರಿಹಾರ ಮಾಡೋಣ ಅಂತ ಸಭಾಪತಿಗಳು ತಿಳಿಸಿ ಚರ್ಚೆಗೆ ಅಂತ್ಯ ಹಾಡಿದ್ರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article