ಅರವಿಂದ್ ಕೆಪಿ ಜೊತೆಗಿದ್ರೆ, ಹೀಗಾ ಮಾಡೋದು ದಿವ್ಯಾ ಉರುಡುಗ

Public TV
1 Min Read
divya

ಬಿಗ್ ಬಾಸ್‌ನ ಪ್ರೇಮ ಪಕ್ಷಿಗಳು ರಿಯಲ್ ಲೈಫ್‌ನಲ್ಲೂ ಜೊತೆಯಾಗಿರೋದು ಗೊತ್ತೆಯಿದೆ. ಸದ್ಯದಲ್ಲೇ ದಿವ್ಯಾ ಉರುಡುಗ- ಅರವಿಂದ್ ಕೆಪಿ (Aravind kp) ಹೊಸ ಬಾಳಿಗೆ ಕಾಲಿಡಲಿದ್ದಾರೆ. ಆದರೆ ಅದ್ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದಿವ್ಯಾ-ಅರವಿಂದ್ ಜೋಡಿಯ ನಯಾ ಫೋಟೋ ಸಖತ್ ವೈರಲ್ ಆಗುತ್ತಿದೆ.

divya uruduga

ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ದಿವ್ಯಾ ಉರುಡುಗ (Divya Uruduga) ಅವರು ಬಿಗ್ ಬಾಸ್ ಮನೆಗೆ(Bigg Boss House) ಕಾಲಿಟ್ಟ ಮೇಲೆ ಲುಕ್ಕೂ ಮತ್ತು ಲಕ್ ಎರಡು ಬದಲಾಯ್ತು. ಈ ಶೋನಿಂದ ಅಪಾರ ಅಭಿಮಾನಿಗಳ ಪ್ರೀತಿ, ಜನಪ್ರಿಯತೆಯನ್ನ ನಟಿ ಗಿಟ್ಟಿಸಿಕೊಂಡಿದ್ರು. ಅಷ್ಟೇ ಅಲ್ಲ, ಬಿಗ್ ಬಾಸ್‌ನಿಂದ ಒಳ್ಳೆಯ ಲೈಫ್ ಪಾರ್ಟರ್ ಕೂಡ ಸಿಕ್ಕರು. ಅವರೇ ಅರವಿಂದ್ ಕೆಪಿ. ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹೈಲೆಟ್ ಆಗಿದ್ದ ದಿವ್ಯಾ-ಅರವಿಂದ್ ಜೊತೆಯಾಗಿ ಈಗ 2 ವರ್ಷಗಳಾಗಿದೆ. ಇದನ್ನೂ ಓದಿ:ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ, ರಾಜ್ ಬಿ ಶೆಟ್ಟಿ

divya 1

ಸದಾ ಒಂದಲ್ಲಾ ಒಂದು ಕಪಲ್ ಫೋಟೋಸ್‌ನಿಂದ ಮೋಡಿ ಮಾಡೋ ಈ ಜೋಡಿ ಈಗ, ನಟಿ ಮಯೂರಿ (Mayuri) ಅವರ ಹುಟ್ಟುಹಬ್ಬಕ್ಕೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಸ್ತ್ ಆಗಿ ಒಟ್ಟಿಗೆ ಊಟ ಮಾಡಿ ಫನ್ ಮಾಡಿದ್ದಾರೆ. ಈ ವೇಳೆ ಅರವಿಂದ್ ಕೆಪಿ ಜೊತೆಯಿದ್ರೆ ದಿವ್ಯಾ ಅದೆಷ್ಟರ ಮಟ್ಟಿಗೆ ತರಲೆ ಮಾಡುತ್ತಾರೆ ಎಂಬುದನ್ನ ಫೋಟೋದಲ್ಲಿ ನೋಡಬಹುದಾಗಿದೆ.

ಅರವಿಂದ್, ದಿವ್ಯಾ ನಟನೆಯ ‘ಅರ್ದಂ ಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾ ರಿಲೀಸ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲಿದ್ದಾರೆ.

Share This Article