ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ: ಎಂಬಿ ಪಾಟೀಲ್

Public TV
2 Min Read
MB Patil

– ಸಿಸಿ ಪಾಟೀಲ್‌ರ ಮಠ ಇದ್ದರೂ ಹೇಳಲಿ ಎಂದು ಟಾಂಗ್ ಕೊಟ್ಟ ಸಚಿವ

ವಿಜಯಪುರ: ನಮಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳಲ್ಲಿ ಘೋಷಣೆ ಮಾಡಿದ್ದೇವೆ. ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡುತ್ತೇವೆ. ಸಿಸಿ ಪಾಟೀಲ್ (CC Patil) ಅವರ ಮಠ ಇದ್ದರೂ ಹೇಳಲಿ ಎಂದು ಟಾಂಗ್ ಕೊಡುವ ಮೂಲಕ ಸಚಿವ ಎಂಬಿ ಪಾಟೀಲ್ (MB Patil) ಮಠಗಳಿಗೆ ಅನುದಾನ ಕೊಡುವ ಭರವಸೆ ನೀಡಿದ್ದಾರೆ.

ಮಠ ಮಾನ್ಯಗಳ ಅನುದಾನ ಕಡಿತ ಮಾಡಲಾಗುತ್ತಿರುವ ಬಗ್ಗೆ ಮಾಜಿ ಸಚಿವ ಸಿಸಿ ಪಾಟೀಲ್ ಆರೋಪ ಮಾಡಿರುವ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್, ನಾವು ಭೇದ-ಭಾವ ಮಾಡಲ್ಲ. ಎಲ್ಲರಿಗೂ ಅನುದಾನ ಕೊಡುತ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚ್ಗಳು, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನು ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಹಣಕಾಸಿನ ಅನುದಾನ ಕೊಡುತ್ತೇವೆ. 1 ವರ್ಷ ಸಿಸಿ ಪಾಟೀಲ್ ತಾಳ್ಮೆಯಿಂದಿರಲಿ ಎಂದರು.

CC PATIL 1

ಬಿಜೆಪಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಎಂಬಿ ಪಾಟೀಲ್, ಸಿಸಿ ಪಾಟೀಲ್ ತಮ್ಮ ಬಜೆಟ್‌ಗಿಂತ 4-5 ಸಾವಿರ ಕೋಟಿ ರೂ. ಜಾಸ್ತಿ ಖರ್ಚು ಮಾಡಿದ್ದಾರೆ. ಸಿಸಿ ಪಾಟೀಲ್ ಯಾಕೆ ಹೆಚ್ಚು ಖರ್ಚು ಮಾಡಿದ್ರು? ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ರೂ. ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್‌ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ? ಜನರನ್ನು ಯಾಕೆ ಮರಳು ಮಾಡಿದ್ದೀರಿ? ಇದರ ಹಿಂದಿನ ಉದ್ದೇಶ ಏನು ಹಾಗಿದ್ರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿಯ ಜೈನಮುನಿ ಹತ್ಯೆ ಖಂಡನೀಯ – ಸಮಗ್ರ ತನಿಖೆ ಆಗಲಿ: ಕಟೀಲ್ ಒತ್ತಾಯ

ಬಿಬಿಎಂಪಿಯಲ್ಲೂ ಭ್ರಷ್ಟಾಚಾರ. ಲೂಟಿ ಹೊಡೆಯಲು ಬಜೆಟ್‌ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರಿ. ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು? ನೀವು ಮಾಡಿದ ಅಕ್ರಮಗಳನ್ನು ಅಶಿಸ್ತನ್ನು ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೇ ಹೇಳಿ ಬಿಟ್ಟಿದ್ದಾರೆ. ಇವರ ಮುಖ ಏನು ಉಳಿದಿಲ್ಲ, ಇವರನ್ನು ಸಿಎಂ ಎಕ್ಸ್ಪೋಸ್ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅನಾರೋಗ್ಯದಿಂದ ಬಿಜೆಪಿ ಮಾಜಿ ಶಾಸಕ ಸಿಎಂ ನಿಂಬಣ್ಣವರ್ ನಿಧನ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article