ಮುಂಬೈ: ಸಿಎಸ್‌ಕೆ ಫ್ರಾಂಚೈಸಿ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು (Ambati Rayudu) ವೈಯಕ್ತಿಕ ಕಾರಣಗಳಿಂದ ಇದೇ ಮೊದಲ ಬಾರಿಗೆ ನಡೆಯುತ್ತಿದ್ದ USA ಮೇಜರ್ ಲೀಗ್ ಕ್ರಿಕೆಟ್ (USA Major League Cricket) ನಿಂದ ಹಿಂದೆ ಸರಿದಿದ್ದಾರೆ.
16ನೇ ಆವೃತ್ತಿಯ ಬಳಿಕ ಐಪಿಎಲ್‌ಗೆ (IPL) ಗುಡ್‌ಬೈ ಹೇಳಿದ್ದ ರಾಯುಡು ಬಳಿಕ ಸಿಎಸ್‌ಕೆ ಸಹೋದರ ತಂಡವಾದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲು ಸಹಿ ಹಾಕಿದ್ದರು. ಆದರೀಗ ರಾಯುಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್ ಸಿಗ್ನಲ್
ಏಕೆಂದರೆ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಆಡಲು ಮುಂದಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯ ಬಳಿಕ ಈ ಕುರಿತು ಮಾತನಾಡಿರುವ ಕಾರ್ಯದರ್ಶಿ ಜಯ್ ಶಾ, ಪೂರ್ವನಿರ್ಧರಿತ ನಿವೃತ್ತಿಯ ಪ್ರವೃತ್ತಿಯನ್ನು ತಡೆಗಟ್ಟಲು ನಾವು ಹೊಸ ನೀತಿಯನ್ನು ಹೊರತರುತ್ತೇವೆ ಎಂದು ಹೇಳಿದ್ದಾರೆ.
ಸಕ್ರಿಯ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನ ನಿರ್ಬಂಧಿಸಲಾಗಿದೆ. ಆದ್ರೆ ಈಗಾಗಲೇ ನಿವೃತ್ತಿಯಾಗಿರುವವರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿದೆ ಎಂದು ಬಿಸಿಸಿಐ (BCCI) ತಿಳಿಸಿದೆ. ಇದನ್ನೂ ಓದಿ: Threadಗೆ ಸ್ಟಾರ್ ಕ್ರಿಕೆಟಿಗರಿಂದ ಫುಲ್ ಸಪೋರ್ಟ್ – ಎಲೋನ್ ಮಸ್ಕ್‌ಗೆ ಟಾಂಗ್ ಕೊಟ್ಟ ಅಶ್ವಿನ್
ವೈಯಕ್ತಿಕ ಕಾರಣಗಳಿಂದಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಜೊತೆಗಿನ ಎಂಎಲ್‌ಸಿಯ ಮೊದಲ ಸೀಸನ್‌ನಲ್ಲಿ ಭಾಗವಹಿಸಲು ಅಂಬಟಿ ರಾಯುಡು ಲಭ್ಯವಿರುವುದಿಲ್ಲ ಎಂದು ಟೆಕ್ಸಾಸ್ ಸೂಪರ್ ಕಿಂಗ್ಸ್ ಫ್ರಾಂಚೈಸಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಯುಎಸ್‌ನ ಚೊಚ್ಚಲ ಮೇಜರ್ ಕ್ರಿಕೆಟ್ ಲೀಗ್ ಇದೇ ಜುಲೈ 13 ರಿಂದ 30ರ ವರೆಗೆ ನಡೆಯಲಿದೆ. ಕೆಕೆಆರ್, ಮುಂಬೈ ಇಂಡಿಯನ್ಸ್ ಸೇರಿದಂತೆ ಐಪಿಎಲ್‌ನ ಫ್ರಾಂಚೈಸಿಗಳು ಸ್ಪರ್ಧೆಯಲ್ಲಿ ತಮ್ಮದೇ ತಂಡಗಳನ್ನ ಹೊಂದಿವೆ.
2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ ರಾಯುಡು, 2013ರಲ್ಲಿ ತಂಡದೊಂದಿಗೆ ಮೊದಲ ಟ್ರೋಫಿಗೆ ಮುತ್ತಿಟ್ಟಿದ್ದರು. 2015, 2017ರಲ್ಲೂ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. ಆ ನಂತರ ಹರಾಜಿನಲ್ಲಿ ಸಿಎಸ್‌ಕೆ ತಂಡದ ಪಾಲಾದರು. ಸಿಎಸ್‌ಕೆ ಪರವೂ 2018, 2021ರ ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ 2023ರ ಆವೃತ್ತಿಯಲ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರಿಂದ ಪ್ರತಿ ಇನ್ನಿಂಗ್ಸ್‌ನಲ್ಲೂ ಇಂಪ್ಯಾಕ್ಟ್ ಪ್ಲೇಯರ್ ಆಗಿಯೇ ಕಣಕ್ಕಿಳಿದರು. 2023ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಭರ್ಜರಿ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡವನ್ನು ಚಾಂಪಿಯನ್ ಹಾದಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ 6ನೇ ಬಾರಿಗೆ ಟ್ರೋಫಿ ಗೆಲುವಿನ ಪಾಲುದಾರರೂ ಆಗಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]