‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷ್ಟನೆ

Public TV
1 Min Read
raj b shetty

ಸ್ಯಾಂಡಲ್‌ವುಡ್ (Sandalwood) ನಟ ರಾಜ್ ಬಿ.ಶೆಟ್ಟಿ (Raj B shetty) ಕೆನ್ನೆಗೆ ಇದ್ದಕ್ಕಿಂತೆಯೇ ಚಂದನವನದ ಯುವನಟಿ ಚೈತ್ರಾ ಆಚಾರ್ ಮುತ್ತಿಟ್ಟಿದ್ದು, ಬಹಿರಂಗ ಸಭೆಯಲ್ಲಿ ಅಪ್ಪಿಕೊಂಡಿದ್ದು ಸ್ಯಾಂಡಲ್‌ವುಡ್‌ನಲ್ಲಿ ಸರಳವಾಸ್ತುವನ್ನು ಮೀರಿದ ಸುದ್ದಿಯಾಗಿತ್ತು. ಇದಕ್ಕೆ ಶೆಟ್ಟರು ಉತ್ತರ ಕೊಟ್ಟಿದ್ದಾರೆ. ಚೈತ್ರಾ ಮುತ್ತಿನ ಪ್ರಕರಣವನ್ನು ಹಗರಣ ಮಾಡದೆ ಅಂತಿಮ ವಿದಾಯ ಹೇಳಿದ್ದಾರೆ. ಏನಿದು ಮುತ್ತಿನ ಕುತ್ತಿನ ಕಥನ?

raj b shetty

ಟೋಬಿ…(Toby) ಇದು ರಾಜ್ ಬಿ.ಶೆಟ್ಟಿ ನಾಯಕನಾಗಿರುವ ಹೊಸ ಚಿತ್ರ. ಭರ್ತಿ ಹದಿನೈದು ಕೋಟಿಯಲ್ಲಿ ನಿರ್ಮಾಣವಾಗಿದೆ. ಬೆಚ್ಚಿ ಬೀಳಿಸುವ ಅವತಾರದಲ್ಲಿ ಶೆಟ್ಟರು ಧಗಧಗಿಸಿದ್ದಾರೆ. ಟಿ.ಕೆ.ದಯಾನಂದ್ ಬರೆದ ವಿಕ್ಷಿಪ್ತ ವ್ಯಕ್ತಿಯ ಕತೆಗೆ ಮಾಸ್ ಚಿತ್ರಕತೆ ಹೆಣೆದಿದ್ದಾರೆ. ಫಸ್ಟ್‌ ಲುಕ್ ಟೀಸರ್ (Toby Teaser) ಅನಾವರಣ(Lanuch) ಮಾಡುವಾಗ ಏಕಾಏಕಿ ನಾಯಕಿ ಚೈತ್ರಾ ಆಚಾರ್, ಶೆಟ್ಟರ ಕೆನ್ನೆಗೆ ಲೊಚಲೊಚ ಮುತ್ತಿಟ್ಟಿದ್ದಾರೆ. ತೆರೆ ಮೇಲೆ ಕಿಸ್ಸಿಡುವುದು ಕಾಮನ್ನು…ಸಭೆಯಲ್ಲಿ ಮುತ್ತಿಟ್ಟಿದ್ದಕ್ಕೆ ಎಲ್ಲರೂ ಸ್ಟನ್‌ಗನ್ನು. ಇದಕ್ಕೆ ಶೆಟ್ಟರು ಶಾಂತವಾಗಿ ಟಿಪ್ಪಣಿ ಬರೆದಿದ್ದಾರೆ.‌ ಇದನ್ನೂ ಓದಿ:ನೀಲಿ ತಾರೆ ಮಿಯಾ ತೆಲುಗಿನ ಡೈರೆಕ್ಟರ್ ಆರ್‌ಜಿವಿ

chaithra achar

ಚೈತ್ರಾ (Chaithra Achar) ಮಗುವಿನ ಮನಸಿನ ಹುಡುಗಿ. ಆಕೆ ಮುಗ್ಧೆ. ಆಕೆ ಮುತ್ತಿಟ್ಟಿದ್ದರಲ್ಲಿ ಯಾವುದೇ ರೀತಿ ಕೆಟ್ಟ ಉದ್ದೇಶ ನನಗೆ ಕಾಣಿಸಲಿಲ್ಲ. ಗೆಳೆಯ ಗೆಳತಿ, ಅಣ್ಣ-ತಂಗಿ ಹಗ್ ಮಾಡೋದು…ಮುತ್ತಿಡೋದು ಸಾಮಾನ್ಯ. ಅದನ್ನೇ ಚೈತ್ರಾ ಮಾಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

raj b shetty 2

ಇದು ಶೆಟ್ಟರ ಒನ್ ಲೈನ್ ಉತ್ತರ. ಅದು ಸಹಜ. ನಿನ್ನೆ ಮೊನ್ನೆ ಬಂದಿರುವ ನಾಯಕಿ ಹೀಗೆ ಸ್ಟೇಜ್ ಮೇಲೆ ನಾಯಕನ ಕೆನ್ನೆಗೆ ಮುತ್ತಿಟ್ಟರೆ ಕೆಲವರು ಏನೇನೊ ಅಂದುಕೊಳ್ಳುತ್ತಾರೆ. ಬಹುಶಃ…ಚೈತ್ರಾಗೆ ಶೆಟ್ಟರು ಕೊಟ್ಟಿರುವ ಪಾತ್ರ ಹಾಗೂ ಅದರ ತೂಕ ಗೊತ್ತಿದೆ. ಅದಕ್ಕಾಗಿಯೇ ಆ ಜೋಶ್‌ನಲ್ಲಿ ಕ್ಷಣ ಹೋಶ್ ಕಳೆದುಕೊಂಡಿದ್ದಾರೆ. ಫೈನಲಿ…ಇನ್ನು ನಾಲ್ಕು ಕಾಲ ಚಿತ್ರರಂಗದಲ್ಲಿ ಬಾಳಬೇಕಾಗಿದೆ ಆ ಹುಡುಗಿ. ಇದನ್ನು ದೊಡ್ಡದು ಮಾಡೋದು ಒಳ್ಳೆದಲ್ಲ. ಹಾಗೆಯೇ ಶೆಟ್ಟರಿಗಿನ್ನೂ ಮದುವೆಯಾಗಿಲ್ಲ. ಹೀಗಾಗಿ ಜ್ವಾಲಾಮುಖಿ ಸಿಡಿದಿಲ್ಲ.

Share This Article