ಚಾಮರಾಜನಗರ: ಎಂದಿನಂತೆ ಈ ಬಾರಿಯೂ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ (Malemahadeshwara Hills) ಮೇಲಿರುವ ಮಲೆಮಹದೇಶ್ವರನ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಬಾರಿಯೂ ಮಾದಪ್ಪ ಕೋಟ್ಯಧೀಶನಾಗಿದ್ದಾನೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದೆ. ಈ ವೇಳೆ ಮಹದೇಶ್ವರನ ಹುಂಡಿಯಲ್ಲಿ 2.47 ಕೋಟಿ ರೂ. ಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ
ಕಳೆದ 36 ದಿನಗಳ ಅವಧಿಯಲ್ಲಿ ಒಟ್ಟು 2,47,15,655 ರೂ. ನಗದು ಸಂಗ್ರಹವಾಗಿದೆ. ನಗದು ಹಣದ ಜೊತೆಗೆ 77 ಗ್ರಾಂ ಚಿನ್ನ (Gold), 2 ಕೆ.ಜಿ 250 ಗ್ರಾಂ ಬೆಳ್ಳಿಯನ್ನು (Silver) ಭಕ್ತರು ಹುಂಡಿಗೆ ಹಾಕುವ ಮೂಲಕ ಮಾದಪ್ಪನಿಗೆ ಸಮರ್ಪಿಸಿದ್ದಾರೆ. ನಗದು ಹಣದ (Money) ಪೈಕಿ 12 ಲಕ್ಷ ರೂ. ನಾಣ್ಯದ ರೂಪದಲ್ಲೇ ಸಂಗ್ರಹವಾಗಿರೋದು ವಿಶೇಷವಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]