8 ತಿಂಗಳು ಎಲ್ಲಾ ಶಾಸಕರು ಸಹಕರಿಸಿ- ಸಿದ್ದರಾಮಯ್ಯ ಮನವಿ

Public TV
1 Min Read
SIDDARAMAIAH 1

ಬೆಂಗಳೂರು: ಎಂಟು ತಿಂಗಳು ಎಲ್ಲಾ ಶಾಕರು ಸಹಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ.

ಬಿಜೆಟ್ ಮಂಡನೆಗೂ ಮುನ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಮಾತನಾಡಿದ ಸಿಎಂ, ಗ್ಯಾರಂಟಿಗಳ ಜಾರಿ ಕಾರಣದಿಂದಾಗಿ ಮೊದಲಿನಂತೆ ಶಾಸಕರಿಗೆ (MLA) ನೂರಾರು ಕೋಟಿ ಅನುದಾನ ಕೊಡುವುದು ಕಷ್ಟವಾಗುತ್ತದೆ. 5-10 ಕೋಟಿ ಅನುದಾನಕ್ಕೇನು ಸಮಸ್ಯೆ ಇಲ್ಲ, ಅದನ್ನ ಕೊಡುತ್ತೇನೆ. ಹೀಗಾಗಿ ಮುಂದಿನ ಬಜೆಟ್ ವರೆಗೆ 8 ತಿಂಗಳ ಕಾಲ ಸಹಕರಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: Karnataka Budget 2023: ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

ಗ್ಯಾರಂಟಿ ಯೋಜನೆಗಳೆ ನಮಗೆ ಆಕ್ಸಿಜನ್. ಲೋಕಸಭಾ ಚುನಾವಣೆವರೆಗೆ (Loksabha Election) ಗ್ಯಾರಂಟಿ ಯೋಜನೆಗಳೆ ನಮ್ಮನ್ನು ಕೈ ಹಿಡಿಯಬೇಕಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಸಿಕೊಡಿ. ಜನರ ಮನಸ್ಸಿಗೆ ಮುಟ್ಟುವಂತೆ ಅದನ್ನ ಪ್ರಚಾರ ಮಾಡಿ ಅದೇ ನಿಮ್ಮನ್ನು ಕೈ ಹಿಡಿಯುತ್ತೆ ಎಂದು ಇದೇ ವೇಳೆ ಸಿಎಂ ಅವರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Web Stories

Share This Article