ತಂದೆ ವಿರುದ್ಧವೇ ಕೊಲೆ ಬೆದರಿಕೆ ಆರೋಪ ಮಾಡಿದ ನಟಿ ಅರ್ಥನಾ ಬಿನು

Public TV
1 Min Read
arthana binu 1

ಖ್ಯಾತ ನಟಿ ಅರ್ಥನಾ ಬಿನು ಸ್ವತಃ ತಂದೆಯ ವಿರುದ್ಧವೇ ಕೊಲೆ ಆರೋಪ ಮಾಡಿದ್ದಾರೆ. ಅಲ್ಲದೇ, ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ತೊಂದರೆ ಮಾಡುತ್ತಾರೆ ಎಂದು ಅವರು ಸುದೀರ್ಘವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.  ಮಲಯಾಳಂ ತಾರೆಯಾಗಿರುವ ಅರ್ಥನಾ ಬಿನು ಅದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

arthana binu 3

ನಟಿ ಅರ್ಥನಾ ಬಿನು ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ, ಮಲಯಾಳಂನಲ್ಲಿ ನಟರೂ ಆಗಿರುವ ವಿಜಯಕುಮಾರ್ ಮೇಲೆ. ವಿಜಯ್ ಕುಮಾರ್ ಮತ್ತು ಅರ್ಥನಾ ಬಿನು ತಾಯಿ ಡಿವೋರ್ಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಇದೀಗ ಅರ್ಥನಾ ತನ್ನ ತಾಯಿಯೊಂದಿಗೆ ಅಜ್ಜಿ ಮನೆಯಲ್ಲಿ ಇದ್ದಾರೆ. ತಂದೆಯಿಂದ ದೂರವಾಗಿ ನೆಮ್ಮದಿಯ ದಿನಗಳನ್ನು ಕಳೆಯುತ್ತಿರುವ ಈ ಕುಟುಂಬಕ್ಕೆ ತಂದೆಯೇ ವಿಲನ್ ಆಗಿದ್ದಾರೆ ಎನ್ನುವುದು ಅರ್ಥನಾ ಆರೋಪ. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

arthana binu 2

ವಿಜಯಕುಮಾರ್ ಮನೆಯ ಕಾಂಪೌಂಡ್ ಹಾರಿ, ಅನಧಿಕೃತವಾಗಿ ಮನೆಯೊಳಗೆ ಪ್ರವೇಶ ಮಾಡುವುದು ಮತ್ತು ಕಿಟಕಿಯಾಚೆ ನಿಂತು ಮಾತನಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ, ‘ಸಿನಿಮಾಗಳಲ್ಲಿ ಮುಂದುವರೆಯದಂತೆ ನನ್ನ ತಂದೆ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾದಲ್ಲಿ ಮುಂದುವರೆದರೆ ಕೊಲ್ಲುವುದಾಗಿ ಹೇಳುತ್ತಿದ್ದಾರೆ. ನಾನು ನಟಿಸುತ್ತಿರುವ ಚಿತ್ರತಂಡದ ವಿರುದ್ಧವೂ ನಿಂದನೆ ಮಾಡಿದ್ದಾರೆ. ಅವರು ಅಕ್ರಮವಾಗಿ ಮನೆ ಪ್ರವೇಶ ಮಾಡುತ್ತಾರೆ. ನಿಂದಿಸುತ್ತಾರೆ’ ಎಂದೆಲ್ಲ ಬರೆದುಕೊಂಡಿದ್ದಾರೆ.

 

ಅವರು ಮನೆಗೆ ಬಂದಾಗ ಪೊಲೀಸ್ ಠಾಣೆಗೆ ಕಾಲ್ ಮಾಡಿದರೆ, ಪೊಲೀಸ್ ನವರು ಸರಿಯಾದ ರೀತಿಯಲ್ಲಿ ಸ್ಪಂದಿಸಲ್ಲ ಎನ್ನುವ ಆರೋಪವನ್ನೂ ಈ ನಟಿ ಮಾಡಿದ್ದಾರೆ. ತಮಗೆ ಜೀವ ಬೆದರಿಕೆಯಿದ್ದು, ಪೊಲೀಸರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವುದು ನಟಿಯ ಆಗ್ರಹ. ಅಲ್ಲದೇ, ತಮ್ಮ ತಂದೆಯ ಮೇಲೆ ಹಲವಾರು ಪ್ರಕರಣಗಳೂ ಇದ್ದು, ಭಯ ಕಾಡುತ್ತಿದೆ ಎಂದಿದ್ದಾರೆ  ಅರ್ಥನಾ ಬಿನು.

Web Stories

Share This Article