ಗೋಹತ್ಯೆ ತಡೆಯಲು ಹೋಗಿದ್ದ ಶಾಸಕರ ವಿರುದ್ಧ FIR ದಾಖಲು

Public TV
1 Min Read
Sharanu Salagar

ಬೀದರ್: ಗೋ ಹತ್ಯೆ ತಡೆಯಲು ಹೋದಾಗ ಅನ್ಯ ಕೋಮಿನ ವ್ಯಕ್ತಿ ಜೊತೆ ಕಿರಿಕ್ ವಿಚಾರವಾಗಿ ಗುರುವಾರ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನೆಯ ಮಾಲೀಕನ ಮಗ ಮೇಹರಾಜ್ ಇನಾಮುಲ್ಲಾಖಾನ್ ಅವರು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು ದೂರಿನ್ವಯ ಬಸವಕಲ್ಯಾಣ ನಗರ ಠಾಣೆಯಲ್ಲಿ (Basavakalyan Police Station) ಎಫ್‌ಐಆರ್ ದಾಖಲಾಗಿದೆ.

Sharanu Salagar 1

ಬಕ್ರೀದ್ ಹಬ್ಬದಂದು ಕುರ್ಬಾನಿ ಕೊಡುತ್ತಿದ್ದಾಗ ಮನೆಗೆ ಬಂದು ಶಾಸಕರು ಮತ್ತು ಅವರ ಬೆಂಬಲಿಗರು ಧಮ್ಮಿ ಹಾಕಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ. ಶಾಸಕ ಶರಣು ಸಲಗರ್ ಹಾಗೂ ಅವರ ಜೊತೆ ಬಂದಿದ್ದ 15-25 ಜನರು ನಮ್ಮ ಮನೆಯ ಬಳಿ ಬಂದು ಕಿರುಚಾಡಿದ್ದು ಅದು ಹೇಗೆ ಕುರ್ಬಾನಿ ಕೊಡುತ್ತೀರಿ ನೋಡೋಣ, ಕಲ್ಯಾಣದಲ್ಲಿ ನಿಮ್ಮದು ಜಾಸ್ತಿಯಾಗಿದ್ದು ನಾವು ಏನು ಎಂದು ತೋರಿಸುತ್ತೇವೆ ಎಂದು ನಮ್ಮ ಹಾಗೂ ನಮ್ಮ ತಂದೆಗೆ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

ಜುಲೈ 1 ರಂದು ಮನೆಯಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಕರೆ ಬಂದಾಗ ಅದನ್ನು ತಡೆಲು ಶಾಸಕರು ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಮನೆಯ ಮಾಲೀಕ ಶಾಸಕರನ್ನು ಒಳಗಡೆ ಬಿಡದಿದ್ದಕ್ಕೆ ಇಬ್ಬರ ಮಧ್ಯೆ ಕಿರಿಕ್ ಆಗಿತ್ತು. ಅಂದು ಶಾಸಕ ಶರಣು ಸಲಗರ್ ನೀಡಿದ ದೂರಿನ್ವಯ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಶಾಸಕ ಸಲಗರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಮನೆಯ ಮಾಲೀಕನ ಮಗ ದೂರು ನೀಡಿದ್ದಾರೆ. ಇದನ್ನೂ ಓದಿ: KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ

Web Stories

Share This Article