ಯುಪಿಯಲ್ಲಿ ಮುಂದುವರೆದ ಬುಲ್ಡೋಜರ್ ಅಸ್ತ್ರ – ಲವ್ ಜಿಹಾದ್ ಆರೋಪಿ ಮನೆ ಉಡೀಸ್

Public TV
1 Min Read
Bulldozer

ಲಕ್ನೋ: ಹಿಂದೂ ಎಂದು ಪರಿಚಯಿಸಿಕೊಂಡು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಮನೆಯ ಮೇಲೆ ಉತ್ತರ ಪ್ರದೇಶದ (Uttar Pradesh) ಅಧಿಕಾರಿಗಳು ಬುಲ್ಡೋಜರ್ (Bulldozer) ಅಸ್ತ್ರ ಪ್ರಯೋಗಿಸಿದ್ದಾರೆ.

ಆರೋಪಿ ಸೋನು ಅಲಿಯಾಸ್ ಸಿಕಂದರ್ ಲವ್ ಜಿಹಾದ್ (Love Jihad) ಆರೋಪ ಎದುರಿಸುತ್ತಿದ್ದಾನೆ. ಉತ್ತರ ಪ್ರದೇಶದ ಫತೇಪುರ್‌ನಲ್ಲಿ 19 ವರ್ಷದ ಯುವತಿಯನ್ನು ಆರೋಪಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯ ಮನೆ ಕೆಡವುವ ಮುನ್ನ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಎಸ್‍ಡಿಎಂ, ತಹಶೀಲ್ದಾರ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: Bengaluru Mysuru Expressway- ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

ಆರೋಪಿ ಮತ್ತು ಯುವತಿ ಜು.22 ರಂದು ಮದುವೆಯೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಆರೋಪಿ ತಾನು ಹಿಂದೂ ವ್ಯಕ್ತಿ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ಬಳಿಕ ಒಬ್ಬಂಟಿಯಾಗಿ ಭೇಟಿಯಾಗುವಂತೆ ಯುವತಿಗೆ ಹೇಳಿದ್ದ. ನಂತರ ಯುವತಿ ಆತನನ್ನು ಭೇಟಿಯಾದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿ, ಸಿಮೆಂಟ್ ಬ್ಲಾಕ್‍ಗಳಿಂದ ಹಲ್ಲೆ ನಡೆಸಿದ್ದ. ಯುವತಿ ತೀವ್ರ ಗಾಯಗೊಂಡು ಅಸ್ವಸ್ಥಳಾದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಯುವತಿಯ ಕುಟುಂಬಸ್ಥರು ಆಕೆಯನ್ನು ಹುಡುಕಿ ಕಾನ್ಪುರ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಳು.

ಆರೋಪಿಯ ತಂದೆ ಮತ್ತು ಆತನ ಸಹೋದರನ ವಿರುದ್ಧವೂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಸೋನು ಅಲಿಯಾಸ್ ಸಿಕಂದರ್, ಆತನ ತಂದೆ ಮತ್ತು ಆತನ ಸಹೋದರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಸಂಬಂಧ ಫತೇಪುರನ ಸದರ್ ಕೊಟ್ವಾಲಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿತ್ಯ ಯೋಗ, ವ್ಯಾಯಾಮದಿಂದ ಮಾರಕ ರೋಗಗಳಿಂದ ಮುಕ್ತಿ ಸಾಧ್ಯ: ರಾಜ್ಯಪಾಲ

Web Stories

Share This Article