ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್ (Rakhi Sawant) ಗೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ (Salman Khan) ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಸಲ್ಮಾನ್ ಮದುವೆ ಕುರಿತಾಗಿ ರಾಖಿ ಮಾತನಾಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬರಿಗಾಲಿನಲ್ಲಿ ಆಗಮಿಸಿದ್ದ ರಾಖಿ ಸಾವಂತ್, ಏಕೆ ಹೀಗೆ ಎಂಬ ಪ್ರಶ್ನೆ ಎದುರಾಯಿತು. ಯಾಕೆ ಚಪ್ಪಲಿ (Chappali) ಹಾಕಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವೆ. ಆ ರೀತಿ ಶಪಥ ಮಾಡಿರುವೆ’ ಎಂದಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ
ಸಲ್ಮಾನ್ ಖಾನ್ ಪರವಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಎನ್ನುವ ಕಾರಣಕ್ಕಾಗಿ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ತಮಗೆ ಬೆದರಿಕೆ ಕರೆ ಬಂದಿದೆ ಎಂದು ರಾಖಿ ಹೇಳಿದ್ದರು. ಈ ಕುರಿತು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಸಲ್ಮಾನ್ ವಿಚಾರವಾಗಿ ಮೂಗು ತೂರಿಸಿದಂತೆ ರಾಖಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ ಎಂದು ರಾಖಿ ಹೇಳಿಕೊಂಡಿದ್ದರು.
ಸಲ್ಮಾನ್ ಖಾನ್ ಬೆಂಬಲಿಸಿದ್ದರ ಪರಿಣಾಮ ತಮಗೆ ಜೀವ ಬೆದರಿಕೆಯಿದ್ದು, ತಾವು ಹೆಲ್ಮೆಟ್ ಧರಿಸಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದು ರಾಖಿ ಹೇಳಿಕೊಂಡಿದ್ದರು. ಹೆಲ್ಮೆಟ್ ಧರಿಸಿಯು ರಸ್ತೆಗೆ ಇಳಿದಿದ್ದರು. ಇದೀಗ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಈ ಮಾತನ್ನು ಎಷ್ಟು ದಿನ ಉಳಿಸಿಕೊಳ್ಳುತ್ತಾರೋ ಸಲ್ಮಾನ್ ಖಾನ್ ನೇ ಬಲ್ಲ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]