ಬೆಂಗಳೂರು: ಕರ್ನಾಟಕದಲ್ಲಿ ಐದು ಭಾಗ್ಯಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಸುಳ್ಳು ಹೇಳಿದೆ. ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ಹಂಚಿ ಅಧಿಕಾರಕ್ಕೆ ಬಂತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (nalin Kumar Kateel) ವಾಗ್ದಾಳಿ ನಡೆಸಿದರು.
ಸರ್ಕಾರದ ಗ್ಯಾರಂಟಿಗಳಿಗೆ ವಿಧಿಸಿರುವ ಷರತ್ತುಗಳ ವಿರುದ್ಧ ಫ್ರೀಡಂ ಪಾರ್ಕ್‍ನಲ್ಲಿ (BJP Protest In Freedom Park) ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಮಾನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಗ್ಯಾರಂಟಿ ಜಾರಿ ಮಾಡ್ತೀವಿ ಅಂದ್ರು. ಆದರೆ ಜಾರಿ ಮಾಡಿಲ್ಲ. ಹೀಗಾಗಿ ಸದನದ ಹೊರಗೆ ಒಳಗೆ ಹೋರಾಟ ಮಾಡ್ತೀವಿ. 10 ಕೆಜಿ ಕೊಡ್ತೀವಿ ಅಂದ್ರು ಈಗ 5 ಕೆಜಿ ಅಂತಿದ್ದಾರೆ ಎಂದರು.
10 ಕೆಜಿ ಅಕ್ಕಿ ಕೊಡಬೇಕು. ವಿದ್ಯುತ್ ಉಚಿತ ಅಂದ್ರು ಈಗ ವಿದ್ಯುತ್ ಬಿಲ್ ಹೊರೆಯಾಗಿದೆ. ಸರ್ಕಾರ ಬಂದು ಒಂದು ತಿಂಗಳಿಗೆ ಜನಾಕ್ರೋಶ ವ್ಯಕ್ತವಾಗಿದೆ. ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಉದ್ಯಮಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತಾಂತರ ನಿಷೇಧ ಕಾಯ್ದೆ ತಂದಿದ್ದೇವೆ. ಆದರೆ ಇದನ್ನು ಕಾಂಗ್ರೆಸ್ ವಾಪಸ್ ತೆಗೆದುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು. ಇದನ್ನೂ ಓದಿ: ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮಂಗಗಳ ಸಾವು – 3 ದಿನ ನೀರು ಕುಡಿದ ಗ್ರಾಮಸ್ಥರಲ್ಲಿ ಆತಂಕ
ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಮೂಲಕ ಗೋಹತ್ಯೆ ಮಾಡುವವರ ಸರ್ಕಾರ ನಿಂತಿದೆ. ಪಠ್ಯದಲ್ಲಿ ರಾಜಕೀಯ ಮಾಡುತ್ತಿದೆ. ನಾವು ವಿರಮಿಸುವುದಿಲ್ಲ ಜನರಿಗೆ ಇವ್ರ ಮೋಸ ತಿಳಿಸುತ್ತೇವೆ. ಕರೆಂಟ್ ಬಿಲ್ ವಾಪಸ್ ತೆಗೆದುಕೊಳ್ಳದೆ ಇದ್ದರೆ ಬೀದಿ ಬೀದಿಯಲ್ಲಿ ಹೋರಾಟ ಮಾಡ್ತೇವೆ. ಜನರಿಗೆ ಬಿಲ್ ಕಟ್ಟೋಕೆ ಬಿಡಲ್ಲ. ಮಂಡಲ ಮಂಡಲದಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಮಾಜಿ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗ್ಯಾರಂಟಿ ಯೋಜನೆ ಪೂರ್ತಿ ಮಾಡಿ. ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಬಿಜೆಪಿ ಘೋಷಣೆ ಹಾಕುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಫ್ರೀಡಂ ಪಾರ್ಕ್‍ನಲ್ಲಿ 697 ಮಂದಿ ಪೆÇಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]