ನ್ಯೂಯಾರ್ಕ್‍ನಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನ- ಜನಮನ ಸೆಳೆದ ಬೆಂಗಳೂರಿನ ಗುರು ರಶ್ಮಿ ನೃತ್ಯ ತಂಡ

Public TV
2 Min Read
BENGALURU DANCE TEAM

ಬೆಂಗಳೂರು: ನ್ಯೂಯಾರ್ಕ್ (NewYork) ನ ಪೌರಾಣಿಕ ಕಾರ್ನೆಗೀ ಹಾಲ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಬೆಂಗಳೂರಿನ ರಶ್ಮಿ ಶಶಿ ಅವರ 30 ವಿಧ್ಯಾರ್ಥಿಗಳ ನೃತ್ಯ ಕಲಾರಸಿಕರ ಮನ ಸೆಳೆಯಿತು. ಡ್ಯಾನ್ಸ್ ಫೆಸ್ಟಿವಲ್ ನಲ್ಲಿ 10 ಆಯ್ದ ನೃತ್ಯ ಶಾಲೆಗಳು ಪಾಲ್ಗೊಂಡಿದ್ದು, ಬೆಂಗಳೂರು ಮೂಲದ ಗುರು ರಶ್ಮಿಯವರ ತಂಡ ಭಾರತೀಯ ಶಾಸ್ತ್ರೀಯ ನೃತ್ಯವನ್ನ ( Indian Classical Dance) ಪ್ರದರ್ಶಿಸಿತು.

ಅಮೆರಿಕಾದ ಪ್ರಸಿದ್ಧ ಫೆಸ್ಟಿವಲ್ ನಲ್ಲಿ ಒಂದಾಗಿರುವ ನ್ಯೂಯಾರ್ಕ್ ಕಾರ್ನೆಗೀ ಡ್ಯಾನ್ಸ್ ಫೆಸ್ಟಿವಲ್ ಗೆ ಪ್ರಪಂಚದಾದ್ಯಂತ ಅತ್ಯುತ್ತಮ ಕಲಾವಿದರನ್ನ ಆಯೋಜಿಸಲಾಗಿತ್ತು. ಫೆಸ್ಟಿವಲ್ ಗೆ ಉತ್ತರ ಅಮೆರಿಕಾದ್ಯಂತ ಕೇವಲ ಹತ್ತು ಪ್ರತಿಷ್ಠಿತ ನೃತ್ಯ ಶಾಲೆಗಳನ್ನು ಆಯ್ಕೆಯಾಗಿದ್ದವು. ಈ ಪೌರಾಣಿಕ ವಿಶ್ವ ವೇದಿಕೆಯಲ್ಲಿ ಗುರು ರಶ್ಮಿ ಅವರ ವಿಧ್ಯಾರ್ಥಿಗಳ ತಂಡ ಭಾರತದ ಪರಂಪರೆಯ ಸಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸುವುದರೊಂದಿಗೆ ದೇಶದ ಗೌರವ ಹೆಚ್ಚಿಸಿದರು.

ಟೆಕ್ಸಾಸ್ ಲ್ಯಾಂಡ್‍ನಲ್ಲಿರುವ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್‍ನ ಕಲಾತ್ಮಕ ನಿರ್ದೇಶಕರಾಗಿರುವ ಗುರು ರಶ್ಮಿ ಶಶಿಯವರು ಬೆಂಗಳೂರಿನವರು. ಭರತನಾಟ್ಯ, ಜಾನಪದ ಮತ್ತು ಭಾರತದ ಇತರ ಸಮಕಾಲೀನ ನೃತ್ಯಗಳ ಕಲಾಕ್ಷೇತ್ರ ಶೈಲಿಯನ್ನು ಕಲಿಸುವಲ್ಲಿ ಗುರು ರಶ್ಮಿ ಪರಿಣತಿ ಹೊಂದಿದ್ದಾರೆ. ಇದನ್ನೂ ಓದಿ: ತಹಶೀಲ್ದಾರ್ ಅಜಿತ್ ರೈ ರಾಯಚೂರಿನ ಸಿರಿವಾರಕ್ಕೆ ಎತ್ತಂಗಡಿ

BENGALURU DANCE TEAM.1png

ಈ ಹಿಂದೆ ಗುರು ರಶ್ಮಿ ಮತ್ತು ಅವರ ವಿದ್ಯಾರ್ಥಿಗಳ ತಂಡ ಯುಎಸ್‍ಎಯಲ್ಲಿ ಅಕ್ಕ ಮತ್ತು ನಾವಿಕದಂತಹ ಪ್ರಮುಖ ಕನ್ನಡ ಸಮಾವೇಶಗಳಲ್ಲಿ ಪ್ರದರ್ಶನ ನೀಡಿದೆ. 2002 ರಲ್ಲಿ ಸೌತ್ ಫ್ಲೋರಿಡಾದಲ್ಲಿ ಸಿರಿ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು 2011 ರಲ್ಲಿ ಹೂಸ್ಟನ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ಅನ್ನು ಪ್ರಾರಂಭಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಯುವ ಪೀಳಿಗೆಗೆ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದರು.

ಯುಎಸ್‍ಎ ಮತ್ತು ಭಾರತದಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ಪ್ರದರ್ಶಿಸಿದ್ದಾರೆ. ದಶಾವತಾರ, ರಾಮಾಯಣ, ಮಾಯಾ – ಸಮಕಾಲೀನ ನೃತ್ಯ ನಾಟಕ, ಪುಣ್ಯಕೋಟಿ, ರಘುವೀರ ಮತ್ತು ನಾರಿ ಪ್ರದರ್ಶನಗಳು ಗುರುತಿಸಲ್ಪಟ್ಟಿವೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಅವರ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Web Stories

Share This Article