ಮುಂಗಡ ಹಣ ಪಡೆದುಕೊಂಡು ಈವರೆಗೂ ಕಾಲ್ ಶೀಟ್ ನೀಡದೇ ಇರುವ ನಟ ನಟಿಯರ ವಿರುದ್ಧ ತಮಿಳು ಚಿತ್ರ ನಿರ್ಮಾಪಕರು ಗರಂ ಆಗಿದ್ದಾರೆ. ಮುಂಗಡ ಹಣ ಪಡೆದೂ, ಶೂಟಿಂಗ್ ಬಗ್ಗೆ ಚಕಾರ ಎತ್ತದ ನಟ-ನಟಿಯರು ವಿರುದ್ಧ ತಮಿಳು ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಾಗಿದ್ದು, ಧನುಷ್ (Dhanush) ಸೇರಿದಂತೆ ಹಲವು ಕಲಾವಿದರ ಮೇಲೆ ನಿಷೇಧದ (Ban) ತೂಗುಕತ್ತಿ ತೂಗಾಡುತ್ತಿದೆ.
ಮೊನ್ನೆಯಷ್ಟೇ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ (Film Chamber) ಹಾಗೂ ಕಲಾವಿದರ ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು (Producer) ಕಲಾವಿದರ ಮೇಲೆ ಆರೋಪ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಧನುಷ್, ರಾಯ್ ಲಕ್ಷ್ಮಿ(Roy Lakshmi) , ಅಮಲಾ ಪೌಲ್ (Amala Paul) ವಿರುದ್ಧವೂ ದೂರು ದಾಖಲಾಗಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್
ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್ ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್ ಗೆ ನೀಡಿದೆಯಂತೆ.
ಕಾಲ್ ಶೀಟ್ ನೀಡದೇ ಇರುವುದು ಒಂದು ಸಮಸ್ಯೆಯಾದರೆ, ಕೆಲ ನಟಿಯರು ಚಿತ್ರೀಕರಣಕ್ಕೆ ಬಂದರೆ, ಅವರಿಗೆ ಹತ್ತು ಜನ ಸೆಕ್ಯೂರಿಟಿ ಗಾರ್ಡ್ ಗಳು ಬೇಕೆಂದು ಹೇಳುತ್ತಾರಂತೆ. ಇದರಿಂದಾಗಿ ಭಾರೀ ಮೊತ್ತದ ಹಣವನ್ನೇ ಸಂಸ್ಥೆಯು ನೀಡಬೇಕಾಗಿದೆ. ಇದನ್ನು ತಪ್ಪಿಸುವಂತೆ ಫಿಲ್ಮ್ ಚೇಂಬರ್ ಗೆ ಕೆಲವು ನಿರ್ಮಾಪಕರು ಪತ್ರ ಬರೆದಿದ್ದಾರೆ. ಸೆಕ್ಯೂರಿಟಿ ಬೇಕಾದ ನಟಿಯರು ತಾವೇ ದುಡ್ಡು ಕೊಟ್ಟ ನೇಮಿಸಿಕೊಳ್ಳಲಿ ಎನ್ನುವುದು ನಿರ್ಮಾಪಕರ ವಾದ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]