ಬಾಲಿವುಡ್‌ನ (Bollywood) ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ ಭಟ್ (Alia Bhatt) ಅವರು ಮದುವೆಯಾದ್ಮೇಲೂ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಹಾಲಿವುಡ್‌ನ ‘ಹಾರ್ಟ್ ಆಫ್ ಸ್ಟೋನ್’ (Heart Of Stone) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ಆಲಿಯಾ ವರ್ತಿಸಿದ ರೀತಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
ಗಾಲ್ ಗಡೋಟ್- ಜೇಮಿ ಡೋರ್ನಾನ್ ನಟನೆಯ ‘ಹಾರ್ಟ್ ಆಫ್ ಸ್ಟೋನ್’ ಆಗಸ್ಟ್ 11ಕ್ಕೆ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ಈ ಚಿತ್ರದಲ್ಲಿ ಆಲಿಯಾ ಕೆಡಿ ಲೇಡಿಯಾಗಿ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರಕ್ಕೆ ರಣ್‌ಬೀರ್ ಪತ್ನಿ ಜೀವತುಂಬಿದ್ದಾರೆ. ಈ ಸಿನಿಮಾದ ಮೂಲಕ ಆಲಿಯಾ ಹಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ:Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್
ಈ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳಾದ ಗಾಲ್ ಗಡೋಟ್, ಜೇಮಿ ಡಾರ್ನನ್ ಜೊತೆ ಆಲಿಯಾ ಭಟ್ (Alia Bhatt) ಅವರು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರಿಗೆ ಯಾವುದೇ ಆಸಕ್ತಿ ಇದ್ದಂತೆ ಕಂಡಿಲ್ಲ. ಅವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಕೂದಲನ್ನು ಸರಿ ಮಾಡಿಕೊಳ್ಳುತ್ತಾ, ಉಗುರನ್ನು ಮುಟ್ಟಿಕೊಳ್ಳುತ್ತಾ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ನಟಿ ಆಲಿಯಾ ಈ ಕುರಿತು ಟ್ರೋಲ್ ಆಗಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬರುವ ಅತಿಥಿಗಳು ಸ್ವಲ್ಪ ಇದೇ ರೀತಿ ಮಾಡುತ್ತಾರೆ. ಅಲ್ಲಿ ಈ ರೀತಿಯ ವರ್ತನೆಗಳನ್ನು ಒಪ್ಪಬಹುದು. ಆದರೆ, ಹಾಲಿವುಡ್‌ನ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ.? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆಲಿಯಾ ನಡೆಯನ್ನ ಖಂಡಿಸಿ, ಸ್ವಲ್ಪ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅವರನ್ನ ನೋಡಿ ಕಲಿಯಿರಿ. ಅವರಿಗೆ ಗೊತ್ತು ಎಲ್ಲಿ ಹೇಗಿರಬೇಕು ಅಂತಾ ಹೀಗೆಂದು ಆಲಿಯಾ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಲಿಯಾ ನಟನೆಯ ಈ ಹಾಲಿವುಡ್ (Hollywood) ಸಿನಿಮಾ ಎದುರು ಪತಿ ರಣ್‌ಬೀರ್ ನಟಿಸಿರುವ ‘ಅನಿಮಲ್’ ಚಿತ್ರ ರಿಲೀಸ್ ಆಗುತ್ತಿದೆ. ಒಂದೇ ದಿನ ಆಲಿಯಾ- ರಣ್‌ಬೀರ್ ನಟಿಸಿರುವ ಬೇರೆ ಬೇರೆ ಚಿತ್ರಗಳು ಪೈಪೋಟಿ ನೀಡಲಿದೆ. ರಣ್‌ವೀರ್ ಸಿಂಗ್ ಜೊತೆ ‘ರಾಕಿ ಔರ್ ರಾಣಿ ಕಾ ಪ್ರೇಮ್ ಕಹಾನಿ’ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]