ಮುಂಬೈ: ಎಐಎಂಐಎಂ (AIMIM) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ತಾಳ್ಮೆ ಕಳೆದುಕೊಂಡು ತಮ್ಮ ಕಾರ್ಯಕರ್ತನನ್ನು ದೂಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
JUST IN: The party workers accidentally put Shaul in Owaisi face, and Owaisi pushed them away. pic.twitter.com/81f6M0BsiB
— ADV. ASHUTOSH J. DUBEY ???????? (@AdvAshutoshBJP) June 26, 2023
ಹೌದು. ಅಮರಾವತಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ ಅವರು ಭಾನುವಾರ (ಜೂನ್ 25) ಅಕೋಲಾಗೆ ಭೇಟಿ ನೀಡಿದ್ದರು. ಅಕೋಲಾ ತಲುಪಿ ತನ್ನ ವಾಹನದಿಂದ ಹೊರಬಂದಾಗ ಕಾರ್ಯಕರ್ತ ಅಜಾಗರೂಕತೆಯಿಂದ ವರ್ತಿಸಿದ್ದರಿಂದ ಓವೈಸಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.
ಓವೈಸಿ ಅವರ ಕಾರು ನಿಲ್ಲುತ್ತಿದ್ದಂತೆಯೇ ನೆರೆದಿದ್ದ ಬೆಂಬಲಿಗರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮದಿಂದ ಸ್ವಾಗತಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಓವೈಸಿ ಕಾರಿನಿಂದ ಹೊರಬರುತ್ತಿದ್ದಂತೆ ಅವರ ಬೆಂಬಲಿಗರು ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಒವೈಸಿ ಅವರನ್ನು ಸನ್ಮಾನಿಸಲು ಬೆಂಬಲಿಗರೊಬ್ಬರು ಶಾಲು (shawl) ಹೊದಿಸಲೆಂದು ಮುಂದೆ ಬಂದಿದ್ದಾರೆ. ಆದಾಗ್ಯೂ ಬೆಂಬಲಿಗ ಓವೈಸಿ ಅವರ ಮುಖಕ್ಕೆ ಶಾಲು ಹಾಕುತ್ತಾರೆ. ಈ ವೇಳೆ ಸಿಟ್ಟುಗೊಂಡ ಓವೈಸಿ ಶಾಲನ್ನು ಎಳೆದು, ಮುಖದ ಮೇಲೆ ಶಾಲು ಹಾಕಿದ ವ್ಯಕ್ತಿಗೆ ಬೈದು ಆತನನ್ನು ದೂಡಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ, ಗುಡ್ಡಕುಸಿತ- ಹಿಮಾಚಲ, ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ ಅವಾಂತರ
ಸದ್ಯ ಈ 15 ಸೆಕೆಂಡ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತಾಳ್ಮೆ ಕಳೆದುಕೊಂಡ ಓವೈಸಿ ಬಗ್ಗೆ ನೆಟ್ಟಿಗರು ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]