ತೆಲುಗು ಚಿತ್ರೋದ್ಯಮದಲ್ಲಿ ಡ್ರಗ್ಸ್ : ಕೇಳಿ ಬಂತು ಮತ್ತೋರ್ವ ನಟಿ ಹೆಸರು

Public TV
2 Min Read
surekha vani 2

ತೆಲುಗು (Telugu) ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಸೂಪರ್ ಹಿಟ್ ಸಿನಿಮಾ ‘ಕಬಾಲಿ’ (Kabali) ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆದ ನಂತರ ದಿನಕ್ಕೊಬ್ಬರ ಹೆಸರು ಆಚೆ ಬರುತ್ತಿದೆ. ಚೌಧರಿ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ತೆಲುಗಿನ ಖ್ಯಾತ ನಟಿ ಸುರೇಖಾ ವಾಣಿ (Surekha Vani) ಹೆಸರು ಇದೀಗ ವೈರಲ್ ಆಗಿದೆ.

surekha vani 4

ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದವರು ಸುರೇಖಾ ವಾಣಿ. ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇವರು ಅರೆಸ್ಟ್ ಆಗಿರುವ ಕೆ.ಪಿ ಚೌಧರಿಗೆ ಆಪ್ತರು ಎಂದು ಹೇಳಲಾಗುತ್ತಿದೆ.  ಆಪ್ತವಾಗಿರುವ ಫೋಟೋವನ್ನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಚೌಧರಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋ ಇದೀಗ ಸುರೇಖಾ ವಾಣಿಗೆ ಮುಳುವಾಗಿದೆ.

surekha vani 1

ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಸುರೇಖಾ ವಾಣಿ, ‘ನನ್ನ ಹೆಸರು ಸುಖಾಸುಮ್ಮನೆ ಡ್ರಗ್ಸ್ ಕೇಸ್ ನಲ್ಲಿ ಕೇಳಿ ಬರುತ್ತಿದೆ. ಫೋಟೋ ವೈರಲ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಯ ಜೊತೆ ಆಪ್ತವಾಗಿ ಇದ್ದೇವೆ ಅಂದರೆ, ನಾವೂ ಡ್ರಗ್ಸ್ ತಗೆದುಕೊಳ್ಳುತ್ತೇವೆ ಎಂಬರ್ಥವಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಹೆಸರು ಹಾಳು ಮಾಡಬೇಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Ashu Reddy 4

ಎರಡು ದಿನಗಳ ಹಿಂದೆಯಷ್ಟೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ತೆಲುಗು ನಟಿ ಅಶು ರೆಡ್ಡಿ (Ashu Reddy) ಹೆಸರು ಕೇಳಿ ಬಂದಿತ್ತು. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ನಿರ್ಮಾಪಕ ಕೆಪಿ ಚೌಧರಿ ಅವರು ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.  ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

Ashu Reddy 2

ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

 

ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

Share This Article