ಕನ್ನಡದಲ್ಲಿ ಕ್ರಿಕೆಟಿಗ ಕೆ.ಎಲ್.ರಾಹುಲ್ ಬಯೋಪಿಕ್?

Public TV
2 Min Read
KL RAHUL

ಭಾರತ ಕ್ರಿಕೆಟ್ ತಂಡದ ಹೆಸರಾಂತ ಆಟಗಾರ ಕೆ.ಎಲ್.ರಾಹುಲ್ (KL Rahul) ಅವರ ಬಯೋಪಿಕ್ ಕನ್ನಡದಲ್ಲಿ ಸಿನಿಮಾವಾಗುತ್ತಿದೆ ಎನ್ನುವ ಗುಸು ಗುಸು ಶುರುವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಆಟಗಾರರ ಬಯೋಪಿಕ್ ಬರುವುದು ತೀರಾ ಅಪರೂಪ. ಹಬ್ಬಿರುವ ಸುದ್ದಿ ನಿಜವಾದರೆ, ಇದೇ ಮೊದಲ ಬಾರಿಗೆ ಕ್ರಿಕೆಟ್ ಆಟಗಾರರೊಬ್ಬರ ಬಯೋಪಿಕ್ (Biopic) ಕನ್ನಡದಲ್ಲಿ ಸಿನಿಮಾವಾಗಲಿದೆ. ಅಂದಹಾಗೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಕೆ.ಆರ್.ಜಿ ಸ್ಟುಡಿಯೋಸ್ ಎಂದು ಹೇಳಲಾಗುತ್ತಿದೆ.

danish sait with naveen shankar

ಮೊನ್ನೆಯಷ್ಟೇ ಇಂದು ಹೊಸ ಸುದ್ದಿಯನ್ನು ಕೊಡುವುದಾಗಿ ಕೆಆರ್.ಜಿ ಸ್ಟುಡಿಯೋಸ್ (K.R.G ) ಘೋಷಣೆ ಮಾಡಿತ್ತು. ಅದು ಹೇಳಿಕೊಂಡಂತೆ ನಿನ್ನೆ ಹೊಸ ಚಿತ್ರವೊಂದನ್ನು ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ವಿಶೇಷ ತಾರಾಗಣವೇ ಇರಲಿದೆ. ಚಿತ್ರಕ್ಕೆ ಕಿರಿಕ್ ‘ಇಟಿ’1  (Kirik ET 1) ಎಂದು ಹೆಸರಿಡಲಾಗಿದ್ದು, ಇದು ಕೆ.ಎಲ್.ರಾಹುಲ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ.

danish sait 2

ಕಿರಿಕ್ ‘et’ 11 ಚಿತ್ರ ಒಂದು ನಗೆ ಹಬ್ಬವಾಗಿ ತಯಾರಾಗಲಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಮುಂದೆ ಅವರು ಭವಿಷ್ಯ ಏನಾಗಲಿದೆ ಎನ್ನುವುದೇ ಸಿನಿಮಾವಂತೆ.

naveen shankar

ಗುಳ್ಟು ಖ್ಯಾತಿಯ ನವೀನ್  ಶಂಕರ್ (Naveen Shankar) ಮತ್ತು ದಾನಿಶ್ ಸೇಠ್ (Danish Sait) ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ, ಸುಮನ್ ಕುಮಾರ್ (Suman Kumar) ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

suman kumar

ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿದ್ದಾರೆ. ಅಲ್ಲದೇ The Family Man ಮತ್ತು Farzi ಯ ಕಥೆಯನ್ನು ಹೆಣೆದಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರು ನೀಡಲಿದ್ದಾರೆ.

 

ಈ ಚಿತ್ರವನ್ನು ಕಾರ್ತಿಕ್, ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸಲಿದ್ದಾರೆ. ಕೆ ಆರ್ ಜಿ ಸ್ಟುಡಿಯೋಸಿನ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4 ನೇ ಚಿತ್ರ ನಿರ್ಮಾಣವಾಗಲಿದೆ. ಕಿರಿಕ್ et 11 ಚಿತ್ರದ ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆಯಂತೆ.

Share This Article