ಚಾಮರಾಜನಗರ: ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗ ಚೆಕ್ಕಿಂಗ್ ಮಾಡಿದ ಪ್ರಸಂಗವೊಂದು ಚಾಮರಾಜನಗರ ಜಿಲ್ಲೆಯ ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಸೂಲಿಗೆ ಕಾಡಾನೆ (Wild Elephant) ವಸೂಲಿಗೆ ಇಳಿದಿದೆ. ಲೋಡ್ ಲಾರಿಗಳನ್ನ ಅಡ್ಡಗಟ್ಟಿದ ಕಾಡಾನೆ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲ ವಾಹನಗಳನ್ನು ತಡೆದು ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
ಮೊದಲು ಕಬ್ಬಿನ ಲಾರಿಗಳನ್ನು ಅಡ್ಡಗಟ್ಟುತ್ತಿದ್ದ ಕಾಡಾನೆ, ಇದೀಗ ತರಕಾರಿ ಲಾರಿಗಳು ಹಾಗೂ ಇತರೆ ವಾಹನಗಳನ್ನು ಅಡ್ಡಗಟ್ಟುತ್ತಿದೆ. ಲಾರಿಗಳ ಟಾರ್ಪಾಲ್ ಕೀಳಲು ಸತತ ಪ್ರಯತ್ನ ಮಾಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಪತ್ನಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಪತಿಯೂ ಸಾವು!