ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಕರೆಂಟ್ ಕಟ್ – ಬೆಸ್ಕಾಂನಿಂದಲೇ ದಂಡ ವಸೂಲಿ ಮಾಡಿದ ಯುವಕ

Public TV
2 Min Read
BESCOM Fine

ದಾವಣಗೆರೆ: ಕರೆಂಟ್ ಬಿಲ್ (Electricity Bill) ಹೆಚ್ಚಳ ಮಾಡಿ ಜನರಿಗೆಲ್ಲ ಶಾಕ್ ನೀಡಿದ್ದ ಬೆಸ್ಕಾಂಗೆ ಇಲ್ಲೊಬ್ಬ ಯುವಕ ಡಬಲ್ ಶಾಕ್ ನೀಡಿದ್ದಾನೆ. ಬಿಲ್ ಕಟ್ಟಿದ್ದರೂ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ, ಬೆಸ್ಕಾಂಗೆ (BESCOM) ಬುದ್ದಿ ಕಲಿಸಿದ್ದಾನೆ.

ದಾವಣಗೆರೆಯ (Davanagere) ಎಂಸಿಸಿಬಿ ಬ್ಲಾಕ್‌ನ ನಿವಾಸಿ ಪವನ್ ಉಲ್ಲಾಸ್ ಎಂಬವರ ಮನೆಗೆ 2022ರ ಆಗಸ್ಟ್‌ನಲ್ಲಿ 1,454 ರೂಪಾಯಿ ಕರೆಂಟ್ ಬಿಲ್ ಬಾಕಿ ಇದ್ದ ಹಿನ್ನಲೆ ಲೈನ್‌ಮೆನ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರು. ಅಲ್ಲದೆ ಮುಂಜಾಗ್ರತೆಯ ನೋಟಿಸ್ ನೀಡದೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ, ಕೆಇಆರ್‌ಸಿ ಕೋಡ್ 2004ರ ಸೆಕ್ಷನ್ 9ನೇ ನಿಯಮದಡಿ ಅದೇಶ ಉಲ್ಲಂಘನೆಯಾಗಿದೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ದಾವೇ ಹೂಡಿದ್ದರು. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

bescom

ಬೆಸ್ಕಾಂ ನಿಯಮ ಉಲ್ಲಂಘನೆ ಸಾಭೀತಾದ ಹಿನ್ನಲೆ ಆಯೋಗದಿಂದ ಬೆಸ್ಕಾಂಗೆ 20 ಸಾವಿರ ರೂಪಾಯಿ ದಂಡ ಹಾಗೂ ದೂರುದಾರನಿಗೆ ಪ್ರಕರಣದ ವೆಚ್ಚದ 5 ಸಾವಿರ ಒಟ್ಟು 25 ಸಾವಿರ ನೀಡುವಂತೆ ಅದೇಶ ಮಾಡಿದ್ದು, ಅದೇಶವಾದ 30 ದಿನದೊಳಗೆ ಪರಿಹಾರ ನೀಡದಿದ್ದರೆ 6%ನಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ತೀರ್ಪು ನೀಡಿದೆ.

ಯಾವುದೇ ಒಬ್ಬ ಗ್ರಾಹಕನ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಬೇಕು ಎಂದರೆ ಏಕಾಏಕಿ ಬಂದು ಲೈನ್‌ಮೆನ್ ಫ್ಯೂಜ್ ತೆಗೆದು ಹೋಗುತ್ತಾರೆ, ಇದು ತಪ್ಪು. ಇದು ಕೆಇಆರ್‌ಸಿ ಸೆಕ್ಷನ್ 9ರ ಅನ್ವಯ ಅವರು ಮೊದಲು 15 ದಿನದ ನೋಟಿಸ್ ನೀಡಬೇಕು. ನಂತರ ಕ್ರಮ ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ ಬೆಸ್ಕಾಂ ಸಿಬ್ಬಂದಿ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅಲ್ಲದೆ ಪ್ರತಿ ತಿಂಗಳು 2ರಂದು ಬಿಲ್ ಬರುತ್ತಿತ್ತು. ಆದರೆ ಈ ತಿಂಗಳ ಕರೆಂಟ್ ಬಿಲ್ 8, 10ರಂದು ಬಂದಿದೆ. ಏಕೆಂದರೆ ಪ್ರತಿಯೊಬ್ಬರ ಮನೆಯ ವಿದ್ಯುತ್ ಬಳಕೆ 100 ಯುನಿಟ್ ದಾಟಿಸಿ ಪ್ರತಿ ಯುನಿಟ್‌ಗೆ 7 ರೂಪಾಯಿ ಬಿಲ್ ಬರುವಂತೆ ಮಾಡಿ ದುಪ್ಪಟ್ಟು ಹಣ ಪಡೆದಿದ್ದಾರೆ. ಇದರಿಂದ ಬೆಸ್ಕಾಂ ವಿರುದ್ಧ ದಾವೆ ಹೂಡಿ ಎಂದು ಪವನ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಗಂಡ

ಕರೆAಟ್ ಬಿಲ್ ಜಾಸ್ತಿ ಮಾಡಿದ ಬೆಸ್ಕಾಂ ಗೆ ಡಬಲ್ ಶಾಕ್ ನೀಡಿದ ಯುವಕನ ಕೆಲಸಕ್ಕೆ ಸಾರ್ವಜನಿಕ ವಲಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article