ನಿಜಕ್ಕೂ ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ್ನಾ?: ಸತ್ಯ ಬಿಚ್ಚಿಟ್ಟ ನಟಿ

Public TV
2 Min Read
RASHMIKA 1 3

ಶ್ಮಿಕಾ ಮಂದಣ್ಣ (Rashmika Mandanna) ವಾರದಿಂದ ಇದೊಂದು ಸುದ್ದಿಯಿಂದ ಲೈಮ್‌ಲೈಟಿನಲ್ಲಿದ್ದರು. ಹಲವು ವರ್ಷಗಳಿಂದ ಇವರ ಬಳಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೋಸ (Cheating)  ಮಾಡಿದ್ದಾನೆ ಎನ್ನುವುದು ಸುದ್ದಿಯ ಸಾರವಾಗಿತ್ತು. ಸುಮಾರು ಎಂಬತ್ತು ಲಕ್ಷ ರೂಪಾಯಿ ಲಪಟಾಸಿದ್ದಕ್ಕೆ ಮ್ಯಾನೇಜರ್‌ನನ್ನು ಕಿತ್ತು ಬಿಸಾಕಿದ್ದಾರೆ ರಶ್ಮಿಕಾ ಅನ್ನೋ ಸುದ್ದಿ ಹರಿದಾಡುತ್ತಿತ್ತು.

Rashmika Mandanna 1 1

ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಈಗ ಸಿಕ್ಕಾಪಟ್ಟೆ ಬಿಜಿ ಬಿಜಿ. ಇದನ್ನೆಲ್ಲ ನೋಡಿಕೊಳ್ಳಲು ಒಂದೊಂದಕ್ಕೆ ಒಬ್ಬೊಬ್ಬ ಕೆಲಸಗಾರರು ಇದ್ದಾರೆ. ಹೈದ್ರಾಬಾದ್, ಮುಂಬೈಗೆ ರಶ್ಮಿಕಾ ಓಡಾಡುತ್ತಿದ್ದಾರೆ. ಈ ನಡುವೆ ಇದೊಂದು ಸಮಾಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿತು. ರಶ್ಮಿಕಾ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭರ್ತಿ ಎಂಬತ್ತು ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಅಂದರೆ ನುಂಗಿ ಹಾಕಿದ್ದಾನೆ. ಅದಕ್ಕಾಗಿ ಅವನನ್ನು ಕಿತ್ತು ಹಾಕಿದ್ದಾರೆ ರಶ್ಮಿಕಾ. ಇದು ಎಲ್ಲ ಮಾಧ್ಯಮದಲ್ಲಿ ಸುದ್ದಿಯಾಯಿತು. ಪೊಲೀಸು, ಕೇಸು, ಕೋರ್ಟು ಇತ್ಯಾದಿಯನ್ನು ಪಕ್ಕಕ್ಕಿಟ್ಟು ರಶ್ಮಿಕಾ ತಣ್ಣಗೆ ಕೆಲಸ ಮುಗಿಸಿದ್ದಾರೆ ಎಂದು ಹೇಳಲಾಗಿತ್ತು.

rashmika mandanna 5

ಅಯ್ಯೋ.. ಕೇಳಿದ್ದರೆ ರಶ್ಮಿಕಾ ಸಾಲ ಕೊಡುತ್ತಿರಲಿಲ್ಲಾವಾ? ಅಷ್ಟು ನಂಬಿಕೆ ಇಟ್ಟಿದ್ದ ಹುಡುಗಿಗೆ ಹೀಗೆ ಮಾಡೋದಾ? ಅವನ್ಯಾವನೋ ಪಕ್ಕಾ ಕಳ್ಳನೇ ಇರಬೇಕು. ಹೀಗಂತ ಎಲ್ಲರೂ ಮಾತಾಡಿಕೊಂಡರು. ಅದನ್ನೇ ನಿಜ ಎಂದು ನಂಬಿದ್ದರು. ಆದರೆ ಅದೇ ರಶ್ಮಿಕಾ ಆಪ್ತರು ಇನ್ನೊಂದು ರೀತಿ ವಿಷಯ ಬಿಚ್ಚಿಟ್ಟಿದ್ದರು. ಮ್ಯಾನೇಜರ್ ನಮ್ಮಲ್ಲಿ ಇದ್ದದ್ದು ನಿಜ. ಆದರೆ ಆತ ಯಾವುದೇ ಮೋಸ ಮಾಡಿಲ್ಲ. ಎಂಬತ್ತು ಲಕ್ಷದ ಕತೆಯಂತೂ ಸುಳ್ಳೆ ಸುಳ್ಳು. ಆತನ ಅವಧಿ ಮುಗಿದಿತ್ತು. ಜೊತೆಗೆ ಆತ ಇನ್ನೇನೊ ಹೊಸ ಕೆಲಸ ಕಂಡುಕೊಂಡಿದ್ದ. ಈ ಕಾರಣಕ್ಕೆ ಇಬ್ಬರೂ ಮಾತಾಡಿ ದೂರವಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

rashmika 2

ಹೀಗಾಗಿ ಎರಡರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವಲ್ಲ? ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಸುಳ್ಳಾ? ಎಲ್ಲವೂ ಬರೀ ಪ್ರಶ್ನೆಗಳೇ. ಇದಕ್ಕೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ  (Reaction)ಕೊಟ್ಟಿರಲಿಲ್ಲ. ಇದೀಗ ಎಂಬತ್ತು ಲಕ್ಷ ರೂಪಾಯಿ ಮೋಸ ಮತ್ತು ಮ್ಯಾನೇಜರ್ ಕುರಿತಾಗಿ ಸ್ವತಃ ರಶ್ಮಿಕಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಮ್ಯಾನೇಜರ್ ಮೋಸ ಮಾಡಿದ್ದಾರೆ ಎನ್ನುವುದು ಸುಳ್ಳು. ಸ್ವತಂತ್ರವಾಗಿ ಕೆಲಸ ಮಾಡಲು ಮ್ಯಾನೇಜರ್ ಬಯಸಿದ್ದರು. ಸೌಹಾರ್ದಯುತವಾಗಿ ಇಬ್ಬರೂ ಬೇರ್ಪಟ್ಟಿದ್ದೇವೆ. ಹಬ್ಬಿರುವ ಸುದ್ದಿ ಸುಳ್ಳು. ನಾವು ಚೆನ್ನಾಗಿಯೇ ಇದ್ದೇವೆ. ಯಾವುದೇ ಮೋಸ ಆಗಿಲ್ಲ ಮತ್ತು ಮಾಡಿಲ್ಲ ಎನ್ನುವ ಅರ್ಥದಲ್ಲಿ ರಶ್ಮಿಕಾ ಪೋಸ್ಟ್ ಮಾಡಿದ್ದಾರೆ.

Share This Article