ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

Public TV
3 Min Read
narendra modi speech in us congress 1

– ಅಮೆರಿಕ ಸಂಸತ್ತಿನಲ್ಲಿ ಮೋದಿ ಭಾಷಣ
– ಎರಡು ಬಾರಿ ಭಾಷಣ ಮಾಡಿದ ಏಕೈಕ ಭಾರತದ ಪ್ರಧಾನಿ

ವಾಷಿಂಗ್ಟನ್‌: ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಗೆ ಭೇಟಿ ನೀಡಿದಾಗ ಭಾರತವು (India) ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿ (Largest Economy) ಹೊರ ಹೊಮ್ಮಿದೆ. ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡ ಆರ್ಥಿಕತೆಯಾಗಿ ಬೆಳೆಯುವುದು ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ (India) ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.

ಅಮೆರಿಕ ಸಂಸತ್ತಿನ (US Congress) ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ಮೂಲಕ ಎರಡು ಬಾರಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಮೊದಲು 2016ರ ಜೂನ್‌ನಲ್ಲಿ ಮೋದಿ ಅಮೆರಿಕದ ಪ್ರವಾಸದ ವೇಳೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ರಜಾಪ್ರಭುತ್ವ ನಮ್ಮ ನರನಾಡಿಯಲ್ಲಿಯೇ ಇದೆ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತೇವೆ. ಜಾತಿ-ಧರ್ಮ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. 2 ಸೂಪರ್ ಪವರ್ ದೇಶಗಳ 2 ಮಹಾನ್ ಶಕ್ತಿಗಳ ಹಾಗೂ ಇಬ್ಬರು ಸ್ನೇಹಿತರ ಮಹಾ ಸಮ್ಮಿಲನ ಇದಾಗಲಿದೆ. ಗಡಿಯಾಚಿನ ಉಗ್ರವಾದ ನಿಗ್ರಹಕ್ಕೆ ಭಾರತ-ಅಮೆರಿಕ ಜಂಟಿಯಾಗಿ ಕೆಲಸ ಮಾಡಲಿದೆ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಎರಡೂ ದೇಶಗಳ ನಡುವೆ ಹೊಸ ಶಕೆ ಆರಂಭಗೊಂಡಿದೆ. ದೇಶಗಳ ನಡುವಿನ ಒಪ್ಪಂದ ದೇಶಕ್ಕಲ್ಲದೇ ಜಗತ್ತಿಗೆ ಅನುಕೂಲ ಆಗಲಿದೆ. ಆರ್ಥಿಕ, ಬಾಹ್ಯಾಕಾಶ, ಇಂಧನ ವಿಚಾರದಲ್ಲಿ ಒಪ್ಪಂದಗಳಾಗಿದ್ದು ಇದು ಇತರೆ ದೇಶಗಳಿಗೂ ಅನುಕೂಲ ಆಗಲಿದೆ ಎಂದರು.

narendra modi speech in us congress 2

ಮೋದಿ ಭಾಷಣದ ಹೈಲೈಟ್ಸ್‌:
ಇಂದು ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯಾಗಿದ್ದು, ಅಲ್ಲಿ ಮಹಿಳೆಯರು ಪ್ರಗತಿಯ ಪಯಣವನ್ನು ಮುನ್ನಡೆಸುತ್ತಾರೆ. ಬುಡಕಟ್ಟು ಹಿನ್ನೆಲೆಯಿಂದ ಬಂದ ಮಹಿಳೆ ನಮ್ಮ ರಾಷ್ಟ್ರದ ಮುಖ್ಯಸ್ಥೆ ಹುದ್ದೆಯನ್ನು ಏರಿದ್ದಾರೆ. ಇದನ್ನೂ ಓದಿ : 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

ಪ್ಯಾರಿಸ್ ಹವಾಮಾನ ಬದ್ಧತೆಯನ್ನು ಪೂರೈಸಿದ ಏಕೈಕ ಜಿ20 ದೇಶ ಭಾರತ. ನಾವು 2030ರ ಗುರಿಗಿಂತ 9 ವರ್ಷಗಳ ಮೊದಲೇ ನಮ್ಮ ಶಕ್ತಿಯ ಮೂಲಗಳಲ್ಲಿ 40% ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೊಂದಿದ್ದೇವೆ. ಇಷ್ಟಕ್ಕೆ ನಾವು ನಿಲ್ಲಲ್ಲಿಲ್ಲ. ಗ್ಲ್ಯಾಸ್ಗೋ ಶೃಂಗಸಭೆಯಲ್ಲಿ, ನಾನು ಮಿಷನ್ ಲೈಫ್ ಅನ್ನು ಪ್ರಸ್ತಾಪಿಸಿದ್ದೆ. ನಮ್ಮ ಮಿಷನ್ ಭೂಮಿಯ ಪ್ರಗತಿಯ ಪರವಾಗಿದೆ, ಭೂಮಿಯ ಸಮೃದ್ಧಿಯ ಪರವಾಗಿದೆ, ಜನರ ಪರವಾಗಿದೆ. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ 

ಭಾರತವು ಪ್ರಪಂಚದ ಎಲ್ಲಾ ನಂಬಿಕೆಗಳಿಗೆ ನೆಲೆಯಾಗಿದೆ ಮತ್ತು ನಾವು ಎಲ್ಲವನ್ನೂ ಆಚರಿಸುತ್ತೇವೆ. ಭಾರತದಲ್ಲಿ, ವೈವಿಧ್ಯತೆಯು ನೈಸರ್ಗಿಕ ಜೀವನ ವಿಧಾನವಾಗಿದೆ. ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತದೆ. ನಮ್ಮಲ್ಲಿ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಸುಮಾರು 20 ವಿವಿಧ ಪಕ್ಷಗಳು ಭಾರತದ ವಿವಿಧ ರಾಜ್ಯಗಳನ್ನು ಆಳುತ್ತವೆ. ನಮ್ಮಲ್ಲಿ 22 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿವೆ. ಆದರೂ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ.

‘ವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯದಿಂದ ನಾವು ಬದುಕುತ್ತಿದ್ದೇವೆ. ಜಗತ್ತೇ ಒಂದು ಕುಟುಂಬ. ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ನಾವು ಪ್ರಪಂಚದ ಜೊತೆ ಮಾತುಕತೆ ನಡೆಸುತ್ತೇವೆ. ನಾವು ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿದ ಬಳಿಕ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಥೀಮ್‌ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಜಾಗತಿಕ ಶಾಂತಿಪಾಲಕರನ್ನು ಗೌರವಿಸಲು ಸ್ಮಾರಕ ಗೋಡೆಯನ್ನು ನಿರ್ಮಿಸಲು ವಿಶ್ವಸಂಸ್ಥೆಯಲ್ಲಿ ಕಳೆದ ವಾರ ನಾವು ಮಾಡಿದ ಪ್ರಸ್ತಾಪಕ್ಕೆ ಎಲ್ಲಾ ರಾಷ್ಟ್ರಗಳು ಅನುಮೋದನೆ ನೀಡಿವೆ.

Share This Article