ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್

Public TV
1 Min Read
Andhra Pradesh swamiji Purnananda Saraswati

ಅಮರಾವತಿ: ತಾನೇ ನಡೆಸುತ್ತಿದ್ದ ಆಶ್ರಮದಲ್ಲಿ 15 ವರ್ಷದ ಅನಾಥ ಬಾಲಕಿ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರ (Rape) ಎಸಗಿರುವ ಆರೋಪದ ಮೇಲೆ ಆಂಧ್ರಪ್ರದೇಶದಲ್ಲಿ (Andhra Pradesh) ಸ್ವಾಮೀಜಿಯೊಬ್ಬರನ್ನು ಬಂಧಿಸಲಾಗಿದೆ.

ಘಟನೆ ವಿಶಾಖಪಟ್ಟಣದಲ್ಲಿನ ಆಶ್ರಮದಲ್ಲಿ ನಡೆದಿದೆ. ಬಾಲಕಿ ಜೂನ್ 13ರಂದು ಆಶ್ರಮದಿಂದ ತಪ್ಪಿಸಿಕೊಂಡು ಹೋಗಿದ್ದು, ಈ ಬಗ್ಗೆ ಪೊಲೀಸರು ನಾಪತ್ತೆಯ ದೂರನ್ನು ದಾಖಲಿಸಿಕೊಂಡಿದ್ದರು. ಬಳಿಕ ಬಾಲಕಿ ವಿಜಯವಾಡ ತಲುಪಿ ಆಶ್ರಮದ ಸ್ವಾಮೀಜಿ ಪೂರ್ಣಾನಂದ ಸರಸ್ವತಿ (Purnananda Saraswati) ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Andhra Pradesh swamiji Purnananda Saraswati 2

ಬಾಲಕಿಯ ಪೋಷಕರು ಆಕೆ ಚಿಕ್ಕವಳಿದ್ದಾಗಲೇ ನಿಧನರಾಗಿದ್ದಾರೆ. ಬಳಿಕ ಆಕೆಯ ಅಜ್ಜಿ 2 ವರ್ಷಗಳ ಹಿಂದೆ ಆಶ್ರಮದಲ್ಲಿ ಅವಳನ್ನು ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾಳೆ. ಕಳೆದ ಹಲವು ತಿಂಗಳುಗಳಿಂದ ಪೂರ್ಣಾನಂದ ಸರಸ್ವತಿ ತನಗೆ ಪದೇ ಪದೇ ಹಿಂಸೆ ನೀಡುತ್ತಿದ್ದರು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರು ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಪೂರ್ಣಾನಂದ ಸರಸ್ವತಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಗೆ ಪೋಷಕರಿಲ್ಲದ ಕಾರಣ ಆಕೆಯ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲಾಗಿದೆ. ಪೂರ್ಣಾನಂದ ಸರಸ್ವತಿ ಕಳೆದ ಹಲವು ತಿಂಗಳುಗಳಿಂದ ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡಸಂಹಿತೆ (IPC) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 17,500 ರೂ. ಕೊಟ್ಟು ಫೇಶಿಯಲ್ ಮಸಾಜ್ ಮಾಡಿಸಿಕೊಂಡ ಯುವತಿ- ಮುಂದೇನಾಯ್ತು..?

Share This Article