ಅನ್ನಭಾಗ್ಯ ಯೋಜನೆ ಜಾರಿಯಾಗದಂತೆ ಕೇಂದ್ರದ ಷಡ್ಯಂತ್ರ: ಪ್ರಿಯಾಂಕ್ ಖರ್ಗೆ ಆರೋಪ

Public TV
3 Min Read
PRIYANK KHARGE

ಕಲಬುರಗಿ: ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದು, ಅನ್ನಭಾಗ್ಯ (Annabhagya) ಯೋಜನೆ ಜಾರಿಗೊಳಿಸದಂತೆ ಷಡ್ಯಂತ್ರ ರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ.

ಕಲಬುರಗಿಯ (Kalaburagi) ಜಿಲ್ಲಾ ಕಾಂಗ್ರೆಸ್ (Congress) ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾಗುತ್ತಿರುವುದಕ್ಕೆ, ನಿರುದ್ಯೋಗ ಸಮಸ್ಯೆ ಹೆಚ್ಚಿರುವುದಕ್ಕೆ ರಾಜ್ಯದ ಕನ್ನಡಗರು ಬಿಜೆಪಿ (BJP) ವಿರುದ್ಧ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವುದಕ್ಕೆ ಸಹಿಸಿಕೊಳ್ಳಲು ಆಗದೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವಿರುದ್ಧ ದ್ವೇಷದ ರಾಜಕಾರಣ ಪ್ರಾರಂಭಿಸಿದೆ ಎಂದರು. ಇದನ್ನೂ ಓದಿ: ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆ ಅಕ್ಕಿ ನೀಡುತ್ತಿಲ್ಲ: ಖಂಡ್ರೆ ವಾಗ್ದಾಳಿ

PRIYANK KHARGE 1 1

ರಾಜ್ಯ ಸರ್ಕಾರದ ವತಿಯಿಂದ 5 ಕೆಜಿ ಹಾಗೂ ಕೇಂದ್ರದಿಂದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ವಿತರಿಸುವುದಾಗಿ ಸಿಎಂ ಜೂನ್ 2 ರಂದು ಹೇಳಿದ್ದರು. ಅದರಂತೆ ಭಾರತೀಯ ಆಹಾರ ನಿಗಮಕ್ಕೆ (FCI) ಪತ್ರ ಬರೆದು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಕೋರಿರುತ್ತಾರೆ. ಆಗ ಉತ್ತರಿಸಿದ ಎಫ್‌ಸಿಐ ಜೂನ್ 12 ರಂದು ಪತ್ರ ಬರೆದು ಪ್ರತಿ ಕ್ವಿಂಟಾಲ್‌ಗೆ 3,400 ರೂ.ಗಳಂತೆ 2.08 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿರುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಫೇಕ್ ನ್ಯೂಸ್‌ಗಳ ಮೂಲ ಪತ್ತೆಹಚ್ಚಿ- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

ಆದರೆ ಅಚ್ಚರಿಯಂತೆ, ಕೇಂದ್ರ ಆಹಾರ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯ ಅಣತಿಯಂತೆ ಎಫ್‌ಸಿಐ ಜೂನ್ 13 ರಂದು ಪತ್ರ ಬರೆದು ಅಕ್ಕಿ ಸರಬರಾಜು ಮಾಡಲು ನಿರಾಕರಿಸಿರುತ್ತದೆ. ಎಫ್‌ಸಿಐನಲ್ಲಿ ಸಾಕಷ್ಟು ಅಕ್ಕಿ ದಾಸ್ತಾನುಗಳಿದ್ದು, ಖಾಸಗಿಯವರಿಗೆ ಸರಬರಾಜು ಮಾಡಲು ಸಿದ್ಧರಿದ್ದರೂ ಕೂಡಾ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿರುವುದು ಗಮನಿಸಿದರೆ ಕೇಂದ್ರಕ್ಕೆ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಬೇಕಿಲ್ಲ. ಅದೇ ರೀತಿ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದು ಬೇಕಿಲ್ಲ ಎಂದು ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಜು.1ಕ್ಕೆ ಅಕ್ಕಿಯನ್ನ ಕೊಡುವ ನಮ್ಮ ವಾಗ್ದಾನ ಖಂಡಿತ ಪೂರೈಸುತ್ತೇವೆ: ಹೆಬ್ಬಾಳ್ಕರ್

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S.Jaishankar) ಅಮೆರಿಕ ಹಾಗೂ ಯೂರೋಪ್ ದೇಶಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ಇದು ದೇಶದ್ರೋಹವಲ್ಲವೇ ಎಂದು ಪ್ರಶ್ನಿಸಿದರು. ಜುಲೈ 1ರಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಛತ್ತೀಸ್‌ಗಢ ರಾಜ್ಯವನ್ನು ಸಂಪರ್ಕಸಲಾಗಿದ್ದು, ಅವರು 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿದ್ದಾರೆ. ಹಾಗಾಗಿ ಯೋಜನೆ ಜಾರಿಗೊಳಿಸುತ್ತೇವೆ. ಆದರೆ ಜುಲೈ 1ರಂದು ಜಾರಿಗೆ ತರಬೇಕೆಂದರೆ ಮೋದಿ (Narendra Modi) ಮನಸು ಮಾಡಿ ರಾಜ್ಯದ ಜನರು ಮತ ಹಾಕದಿದ್ದರೂ ಪರವಾಗಿಲ್ಲ ಎಂದು ಅಕ್ಕಿ ಸರಬರಾಜು ಮಾಡಿದರೆ ಸಾಧ್ಯವಾಗುತ್ತದೆ ಎಂದರು. ಇದನ್ನೂ ಓದಿ: ಇದೊಂದು ಸುಳ್ಳ, ಮಳ್ಳ ಸರ್ಕಾರ – ತಾಕತ್ತಿದ್ದರೆ ಅಕ್ಕಿ ಕೊಡಿ; ಬೊಮ್ಮಾಯಿ ಕಿಡಿ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೇಕಾಗುವಷ್ಟು ಅನುದಾನ ನೀಡಲು ಸಿದ್ಧವಿರುವುದಾಗಿ ಹೇಳಿದ ಸಚಿವರು, ಮಳೆ ಕೊರತೆಯಿಂದಾಗಿ ಮೋಡ ಬಿತ್ತನೆ ಕುರಿತಂತೆ ಕಂದಾಯ ಸಚಿವರು ಈಗಾಗಲೇ ಹೇಳಿಕೆ ನೀಡಿರುತ್ತಾರೆ ಎಂದರು. ಕೆಕೆಆರ್‌ಡಿಬಿಯ ವಿರುದ್ಧ ನನ್ನ ಆರೋಪವಿತ್ತು. ಪ್ರಸ್ತುತ ನಡೆಯುತ್ತಿರುವ ಕೆಕೆಆರ್‌ಡಿಬಿ (KKRDB) ಅವ್ಯವಹಾರದ ತನಿಖೆಯಲ್ಲಿ ಆಪ್ತ ಕಾರ್ಯದರ್ಶಿ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು. ಇದನ್ನೂ ಓದಿ: ಕೊಲ್ಲೂರು ದೇಗುಲದಿಂದ ಬರ್ತಿದ್ದ ಒಂದು ಹಿಡಿ ಅಕ್ಕಿಯನ್ನೂ ನಿಲ್ಲಿಸಿರಲಿಲ್ಲ, ಆದ್ರೂ ಪ್ರತಿಭಟಿಸಿದ್ರು: ರಮಾನಾಥ ರೈ

ಪತ್ರಿಕಾಗೋಷ್ಟಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ಶಾಸಕರಾದ ಕನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ, ಬಿ.ಆರ್. ಪಾಟೀಲ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡೇವಿಡ್ ಸಿಮೆಯೋನ್, ಸುಭಾಷ ರಾಠೋಡ್, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಲಂಚ ಮುಕ್ತ ಕರ್ನಾಟಕ ಮಾಡುತ್ತೇವೆ: ಡಿಕೆಶಿ ಶಪಥ

Share This Article