ಶತಮಾನ ಪೂರೈಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ – ಸಾವರ್ಕರ್, ಗೋಡ್ಸೆಗೆ ನೀಡಿದಂತೆ ಎಂದು ಕಾಂಗ್ರೆಸ್ ಕಿಡಿ

Public TV
2 Min Read
Gita Press

– 1 ಕೋಟಿ ನಗದು ಬಹುಮಾನ ನಿರಾಕರಿಸಿದ ಗೀತಾ ಪ್ರೆಸ್

ನವದೆಹಲಿ: 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು (Gandhi Peace Prize) ಗೋರಖ್‌ಪುರದ ಗೀತಾ ಪ್ರೆಸ್‌ಗೆ (Gita Press) ನೀಡುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಭಾನುವಾರ ತಿಳಿಸಿದೆ. ಆದರೆ ಕೇಂದ್ರದ ನಿಲುವನ್ನು ಕಾಂಗ್ರೆಸ್ ಟೀಕಿಸಿದ್ದು, ಸಾವರ್ಕರ್ ಹಾಗೂ ಗೋಡ್ಸೆಗೆ ಈ ಪ್ರಶಸ್ತಿ ನೀಡಿದಂತೆ ಎಂದು ಹೇಳಿದೆ. ಈ ವಿವಾದಗಳ ನಡುವೆ ಗೀತಾ ಪ್ರೆಸ್ 1 ಕೋಟಿ ರೂ. ನಗದು ಬಹುಮಾನವನ್ನು ನಿರಾಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿ ಭಾನುವಾರ ಗೀತಾ ಪ್ರೆಸ್‌ಗೆ ಪ್ರಶಸ್ತಿ ನೀಡಲು ಆಯ್ಕೆ ಮಾಡಿರುವುದಾಗಿ ಸರ್ವಾನುಮತದಿಂದ ನಿರ್ಧರಿಸಲಾಯಿತು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 2021ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದಿರುವ ಗೋರಖ್‌ಪುರದ ಗೀತಾ ಪ್ರೆಸ್ ಅನ್ನು ನಾನು ಅಭಿನಂದಿಸುತ್ತೇನೆ. ಇದು 100 ವರ್ಷಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸಲು ಶ್ಲಾಘನೀಯ ಕೆಲಸ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಆದರೆ ಕೇಂದ್ರದ ಈ ನಿರ್ಧಾರವನ್ನು ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಟೀಕಿಸಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಸಾವರ್ಕರ್ ಹಾಗೂ ಗೋಡ್ಸೆಗೆ ನೀಡಿದಂತೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪರಿಷತ್‌ ಉಪಚುನಾವಣೆ: ಶೆಟ್ಟರ್‌, ಬೋಸರಾಜು, ತಿಪ್ಪಣ್ಣಪ್ಪಗೆ ಕಾಂಗ್ರೆಸ್‌ ಟಿಕೆಟ್‌

ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಹಲವು ಸಾಮಾಜಿಕ ವಿಚಾರಗಳಲ್ಲಿ ಮಹಾತ್ಮ ಗಾಂಧೀಜಿ ಅವರೊಂದಿಗೆ ಗೀತಾ ಪ್ರೆಸ್ ಸಂಸ್ಥೆ ಸಂಘರ್ಷ ನಡೆಸಿತ್ತು. 2015ರಲ್ಲಿ ಅಕ್ಷಯ ಮುಕುಲ್ ಬರೆದಿರುವ ಪುಸ್ತಕದಲ್ಲಿ ಈ ಎಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಎಂದು ಜೈರಾಮ್ ರಮೇಶ್ (Jairam Ramesh) ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ವಿವಾದಗಳ ನಡುವೆ ಗೀತಾ ಪ್ರೆಸ್ 1 ಕೋಟಿ ರೂ. ನಗದು ಬಹುಮಾನವನ್ನು ನಿರಾಕರಿಸಿದೆ. ಗಾಂಧಿ ಶಾಂತಿ ಪ್ರಶಸ್ತಿಯ ಪುರಸ್ಕಾರ ಮಾತ್ರ ಸಾಕು. ಸರ್ಕಾರ ನಗದು ಬಹುಮಾನದ ಮೊತ್ತವನ್ನು ಅಗತ್ಯವಿರುವ ಕಾರ್ಯಗಳಿಗೆ ಬಳಸಿಕೊಳ್ಳಲಿ ಎಂದು ಮನವಿ ಮಾಡಿದೆ. ಗಾಂಧಿ ಶಾಂತಿ ಪುರಸ್ಕಾರದ ಪ್ರಶಸ್ತಿ ಪತ್ರದ ಜೊತೆಗೆ ಫಲಕ ಹಾಗೂ ಕೈಮಗ್ಗದ ಅಲಂಕಾರಿಕ ವಸ್ತುಗಳನ್ನು ಕೂಡಾ ನೀಡಲಾಗುತ್ತದೆ. ಆದರೆ ತಮಗೆ ಪ್ರಶಸ್ತಿ ಪತ್ರ ಮಾತ್ರ ಸಾಕು ಎಂದು ಗೀತಾ ಪ್ರೆಸ್ ಹೇಳಿದೆ. ಇದನ್ನೂ ಓದಿ: ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

Share This Article