ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

Public TV
1 Min Read
BCM

ನವದೆಹಲಿ: ಒಡಿಶಾದ (Odisha) ಬಾಲಸೋರ್‌ನಲ್ಲಿ ನಡೆದ ಸರಣಿ ರೈಲು ದುರಂತದ (Train Tragedy) ಬಳಿಕ ರೈಲ್ವೆ ಇಲಾಖೆ (Railway Department) ಎಚ್ಚೆತ್ತುಕೊಂಡಿದೆ. ಆಗ್ನೇಯ ರೈಲ್ವೆಯ ಎಲ್ಲಾ ಹಳಿಗಳನ್ನು ಡೀಪ್ ಸ್ಕ್ರೀನಿಂಗ್‌ (Deep Screening) ಮಾಡಲು ನಿರ್ಧರಿಸಿದ್ದು, 370 ಕೋಟಿ ರೂ. ಟೆಂಡರ್ ಕರೆಯಲಾಗಿದೆ.

ಆಗ್ನೇಯ ರೈಲ್ವೆಯ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳಲ್ಲಿ ಮುಖ್ಯ ಮಾರ್ಗದ ಹಳಿಗಳ ಆಳವಾದ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಈ ದೊಡ್ಡ ಕಸರತ್ತಿಗೆ 150ಕ್ಕೂ ಹೆಚ್ಚು ಬಾಲಾಸ್ಟ್‌ ಕ್ಲೀನಿಂಗ್‌ ಮೆಷಿನ್ (BCM) ಬಳಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಟ್ರ್ಯಾಕ್‌ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ ಮತ್ತು ಒಳಚರಂಡಿಯನ್ನು ಪುನಃ ಸ್ಥಾಪಿಸುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

ಈ ಪ್ರಕ್ರಿಯೆ ಬಳಿಕ ಟ್ರ್ಯಾಕ್‌ನ ಸ್ಥಿರತೆಯನ್ನು ಪುನಃ ಸ್ಥಾಪಿಸಲು ಡೈನಾಮಿಕ್ ಟ್ರ್ಯಾಕ್‌ ಸ್ಟೇಬಿಲೈಸರ್ ಮತ್ತು ಬ್ಯಾಲೆಸ್ಟ್ ರೆಗ್ಯುಲೇಟಿಂಗ್ ಯಂತ್ರಗಳನ್ನು ಬಳಸಿ ಪರಿಶೀಲಿಸಲಾಗುತ್ತದೆ. ರೈಲು ಜಾಯಿಂಟ್‌ಗಳ ನಯಗೊಳಿಸುವಿಕೆ, ಜೋಗಲ್ಡ್ ಫಿಶ್ ಪ್ಲೇಟ್‌ಗಳನ್ನು ತೆರೆಯುವುದು ಮತ್ತು ಮರುಸ್ಥಾಪಿಸುವಂತಹ ಇತರ ಚಟುವಟಿಕೆಗಳನ್ನು ಸಹ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ನಟಿ ಖುಷ್ಬೂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- ಡಿಎಂಕೆ ನಾಯಕ ಅರೆಸ್ಟ್, ಪಕ್ಷದಿಂದ ಉಚ್ಛಾಟನೆ

ಆಗ್ನೇಯ ರೈಲ್ವೆ ವಲಯವು ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ಒಳಗೊಂಡಿದೆ. ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತ (CRS) ಹಾಗೂ ಸಿಬಿಐ ತನಿಖೆ ನಡೆಸುತ್ತಿದ್ದು, ಸಿಗ್ನಲ್ ದೋಷವೇ ಅಪಘಾತಕ್ಕೆ ಕಾರಣ ಎಂದು ಊಹಿಸಲಾಗುತ್ತಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಲೂಪ್ ಲೈನ್‌ನಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 271 ಮಂದಿ ಸಾವನ್ನಪ್ಪಿದ್ದು, 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

Share This Article