ಫಾದರ್ಸ್ ಡೇ ದಿನವೇ ಕಲಬುರಗಿಯಲ್ಲಿ ಮನಕಲಕುವ ಘಟನೆ – ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ

Public TV
1 Min Read
Kalaburagi suicide

ಕಲಬುರಗಿ: ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಮೃತರನ್ನು ಚಿಂಚೋಳಿಯ ಕುಂಚಾವರಂನ ಹಣಮಂತ (36), ಅಕ್ಷತಾ (6) ಹಾಗೂ ಓಕಾಂ (9) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

ಹಣಮಂತ ಪತ್ನಿ ಹಾಗೂ ಮಕ್ಕಳೊಂದಿಗೆ ಹೈದ್ರಾಬಾದ್‍ನಲ್ಲಿ ವಾಸಿಸುತ್ತಿದ್ದ. ಒಂದು ವಾರದ ಹಿಂದಷ್ಟೆ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದು ಕುಂಚಾವರಂಗೆ ಬಂದಿದ್ದರು. ಅಲ್ಲದೇ ಈ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಳು. ಬಳಿಕ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿ ಹೇಳಿ ಕಳಿಸಿದ್ದರು. ನಂತರ ಮತ್ತೆ ವಾಪಾಸ್ ಹೈದ್ರಾಬಾದ್‍ಗೆ ತೆರಳಿದ್ದರು.

ಹಣಮಂತ ಶನಿವಾರ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದ. ಭಾನುವಾರ ತಂದೆ ಮತ್ತು ಮಕ್ಕಳ ಶವ ಬಾವಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

Share This Article