ಚಂಡೀಗಢ: ಹಗಲು ರಾತ್ರಿ ಮದ್ಯಪಾನ ಮಾಡುತ್ತಾರೆ ಎಂಬ ವಿಪಕ್ಷಗಳ ಆರೋಪಕ್ಕೆ, ನನ್ನ ಲಿವರೇನೂ ಕಬ್ಬಿಣದ್ದಾ? ಎಂದು ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಟಿವಿ ಸಂದರ್ಶನವೊಂದರಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಕಳೆದ 12 ವರ್ಷಗಳಿಂದ ಅವರು ಇಡೀ ಹಗಲು ರಾತ್ರಿ ಕುಡಿಯುತ್ತಾರೆ ಎಂದು ಅವರ ವಿರುದ್ಧ ವಿಪಕ್ಷಗಳು ಆರೋಪಿಸಿದ್ದವು. ಇದಕ್ಕೆ ಮಾನ್, ಒಬ್ಬ ವ್ಯಕ್ತಿ ಕಳೆದ 12 ವರ್ಷಗಳಿಂದ ಹಗಲಿರುಳು ಕುಡಿಯುತ್ತಿದ್ದರೆ ಅವನು ಇನ್ನೂ ಬದುಕಿರುತ್ತಾನಾ? ಹಾಗಾದರೆ ನನ್ನ ಲಿವರ್ ಕಬ್ಬಿಣದ್ದಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು
ವಿಪಕ್ಷಗಳಿಗೆ ವಿರೋಧಿಸಲು ಕಾರಣ ಇಲ್ಲದಿರುವಾಗ ನಾನು ಯಾವಾಗಲೂ ಕುಡಿಯುತ್ತೇನೆ ಎನ್ನುತ್ತಾರೆ. ನಾನು ಬೆಳಿಗ್ಗೆ 6 ಗಂಟೆಗೆ ಎದ್ದು ಮೊದಲು ಫೈಲ್ ಕೇಳುತ್ತೇನೆ. ಕಳೆದ 70 ವರ್ಷಗಳಲ್ಲಿ ಆಗದ ಕೆಲಸಗಳನ್ನು ಕಳೆದ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿದ್ದೇನೆ ಎಂದಿದ್ದಾರೆ.
ಜನವರಿ 2019ರ ಸಾರ್ವಜನಿಕ ರ್ಯಾಲಿಯಲ್ಲಿ ತನ್ನ ತಾಯಿ ಮತ್ತು ಎಎಪಿ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಭಗವಂತ್ ಮಾನ್ ಮದ್ಯಪಾನವನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೂ ಅವರು ಕುಡಿಯುತ್ತಾರೆ ಎಂದು ವಿಪಕ್ಷಗಳು ಆರೋಪಿಸುತ್ತಲೇ ಇದ್ದವು. ಕಳೆದ ವರ್ಷ ಭಗವಂತ್ ಮಾನ್ ಅವರು ಜರ್ಮನಿಯಲ್ಲಿ ತುಂಬಾ ಕುಡಿದಿದ್ದರು. ಅದಕ್ಕಾಗಿ ಅವರನ್ನು ವಿಮಾನದಿಂದ ಇಳಿಸಲಾಯಿತು. ಇದರಿಂದ ವಿಮಾನ ತಡವಾಗಿ ಹಾರಾಟ ಮಾಡಿತ್ತು ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಇದನ್ನು ಎಎಪಿ ತಳ್ಳಿಹಾಕಿತ್ತು. ಅಲ್ಲದೇ ಪಾರ್ಲಿಮೆಂಟ್ ಹಾಗೂ ಗುರುದ್ವಾರದಲ್ಲಿ ಮಾನ್ ಕುಡಿದಿದ್ದರು ಎಂಬ ಆರೋಪಗಳು ಅವರ ಮೇಲಿವೆ. ಇದನ್ನೂ ಓದಿ: ಸಾಕ್ಷಿ ಮಲಿಕ್ ಕಾಂಗ್ರೆಸ್ ಕೈಗೊಂಬೆ; ನಿಜ ಉದ್ದೇಶ ಬಹಿರಂಗಪಡಿಸೋ ಸಮಯ ಬಂದಿದೆ – ಬಬಿತಾ ಫೋಗಟ್